– ಶಾಲಾ ಮಕ್ಕಳ ಮನಸ್ಸು ಪರಿಶುದ್ಧ ಹಾಲಿನಂತಹದ್ದು, ಆ ಮನಸ್ಸನ್ನು ಕಲುಷಿತಗೊಳಿಸಬೇಡಿ
ಹಾಸನ: ಭಗವದ್ಗೀತೆಯನ್ನು ಅವರವರ ಕುಟುಂಬದಲ್ಲಿ ಹೇಳಿ ಕೊಡುತ್ತಾರೆ. ಮಕ್ಕಳ ಬದುಕನ್ನು ಕಟ್ಟಿಕೊಡಲು ಸರ್ಕಾರ ಇರುವುದಾಗಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ ಟಿ.ಮಾಯಗೌಡನಹಳ್ಳಿಯಲ್ಲಿ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರ ಮಾತನಾಡಿದ ಅವರು, ಭಗವದ್ಗೀತೆಯನ್ನು ಅವರವರ ಕುಟುಂಬದಲ್ಲಿ ಹೇಳಿ ಕೊಡುತ್ತಾರೆ. ಮಕ್ಕಳ ಬದುಕನ್ನು ಕಟ್ಟಿಕೊಡಲು ಸರ್ಕಾರ ಇರುವುದಾಗಿದೆ. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ವಿಷಯಗಳು ಶಾಲೆಗಳಲ್ಲಿ ಇರಬೇಕು. ಹಿಂದೂ ಸಮಾಜದ ಎಲ್ಲಾ ಬಂಧುಗಳಿಗೂ ಮನವಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ : ಮಹಾತ್ಮ ಗಾಂಧಿ ಧರ್ಮಪತ್ನಿ ಕೂಡ ತಲೆಗೆ ಸೆರಗು ಹಾಕುತ್ತಿದ್ದರು: ಹಿಜಬ್ ಬೆಂಬಲಿಸಿದ ಹೆಚ್‌ಡಿಕೆ
Advertisement
Advertisement
ನಾನೂ ಹುಟ್ಟಿರೋದು ಹಿಂದೂ ಸಮಾಜವೇ, ನಮ್ಮ ಕುಟುಂಬ ದೇವರ ಮೇಲೆ ಅಪಾರ ನಂಬಿಕೆ ಇಟ್ಟಿದೆ. ದೇವರ ಭಯದ ಹಿನ್ನೆಲೆಯಲ್ಲಿ ನಾವು ನಡೆದುಕೊಳ್ಳುವ ರೀತಿ, ನಮ್ಮ ಕುಟುಂಬದವರಷ್ಟು ಯಾವ ಕುಟುಂಬಗಳು ರಾಜ್ಯ, ರಾಷ್ಟ್ರದಲ್ಲಿ ದೇವರನ್ನು ನಂಬಿ ಬಂದತವರು ಇಲ್ಲಾ. ಕೇವಲ ಮತ ಬ್ಯಾಂಕ್‍ಗಾಗಿ ಈ ರೀತಿ ಘಟನೆಗಳು ನಡೆಯುತ್ತಿವೆ ಎಂದಿದ್ದಾರೆ.
Advertisement
Advertisement
ಒಂದು ಕಾಲದಲ್ಲಿ ವಿದ್ಯೆ ಒಂದು ವರ್ಗಕ್ಕೆ ಸೇರಿದ್ದು ಎನ್ನುವ ವಾತಾವರಣವಿತ್ತು. ಅದೇ ಒಂದು ವರ್ಗದ ಜನ, ಈ ರೀತಿಯ ವಾತಾವರಣ ಎಲ್ಲರ ಮೇಲೆ ಹೇರಲಿಕ್ಕೆ ಹೊರಟಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ನ್ಯೂನತೆಗಳನ್ನು ಇಟ್ಟುಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ಈ ರೀತಿಯ ವಿಷಯಗಳನ್ನು ಕೆದಕಿ, ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಮಾಡಿ ಅಂಥ ಭಗವದ್ಗೀತೆಯಲ್ಲಿ ಹೇಳಿದ್ದಾರಾ? ಭಗವದ್ಗೀತೆಯಲ್ಲಿ ಇರುವುದು ಧರ್ಮೋ, ರಕ್ಷಿತಾ, ರಕ್ಷಿತಹ: ಹಾಲಿನ ರೀತಿ ಪರಿಶುದ್ಧವಾದ ಮನಸ್ಸನ್ನು ಒಡೆಯಬೇಡಿ ಎಂದು ಸಂದೇಶ ಕೊಟ್ಟಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2.. ಹುಷಾರ್, ಮಾರ್ಚ್ 21ಕ್ಕೆ ತೂಫಾನ್ ಅಪ್ಪಳಿಸಲಿದೆ!
ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪನ್ನು ಕೆಲವರು ವಿರೋಧಿಸುತ್ತಿರುವ ವಿಚಾರ, ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ ಟಿ.ಮಾಯಗೌಡನಹಳ್ಳಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ. ನನ್ನ ಹೇಳಿಯನ್ನು ವ್ಯಾಟ್ಸಪ್‍ನಲ್ಲಿ ತಿರುಚಿದ್ದಾರೆ. ನಾನು ಎಲ್ಲೂ ಸಹ ವೈಯುಕ್ತಿಕವಾಗಿ ಹಿಜಾಬ್ ಬಗ್ಗೆ ಚರ್ಚೆ ಮಾಡಿಲ್ಲ. ಹೈಕೋರ್ಟ್ ತೀರ್ಪನ್ನು ನಾವೆಲ್ಲರೂ ತಲೆ ಭಾಗಿ ಸ್ವೀಕರಿಸಬೇಕು ಎಂದು ಹೇಳಿದ್ದೇನೆ. ಪಿಯುಸಿವರೆಗೂ ಸಮವಸ್ತ್ರ ಇದೆ ಎಂದಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ
ಹಿಂದಿನ ಕಾಲದಲ್ಲಿ ಒಂದು ವರ್ಗದಲ್ಲಿ ಯಾರಾದರೂ ತೀರಿಕೊಂಡರೆ ತಲೆ ಬೋಳಿಸಿ, ಬಳೆ ಒಡೆದು, ತಲೆಗೆ ಸೆರಗು ಹಾಕಿಕೊಂಡು ಇರಬೇಕು ಎಂಬ ಮೌಢ್ಯ ತಂದಿದ್ದರು. ಹೆಣ್ಣುಮಕ್ಕಳಿಗೆ ಎಜುಕೇಷನ್ ಕೊಟ್ಟಾಗ ಆ ಮೌಲ್ಯಗಳೆಲ್ಲ ಹೋದವು. ಈಗ ಹಿಜಾಬ್ ವಿಷಯ ಇಟ್ಟುಕೊಂಡು ಕೆಲವರು ರಾಜಕಾರಣ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಮುಸ್ಲಿಂ ಸಮಾಜದ ಹೆಣ್ಣುಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಸರ್ಕಾರ ನಡವಳಿಕೆಗಳಿದ್ದರೆ ಈ ಮೌಡ್ಯಗಳು ತನಗೆ ತಾನೇ ಹೊರಟು ಹೋಗುತ್ತವೆ. ಇವತ್ತು ದೊಡ್ಡ ಘರ್ಷಣೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಶಾಲಾ ಮಕ್ಕಳು ಮನಸ್ಸು ಪರಿಶುದ್ಧ ಹಾಲಿನಂತಹದ್ದು, ಆ ಮನಸ್ಸನ್ನು ಕಲುಷಿತಗೊಳಿಸಬೇಡಿ. ಅದು ಯಾವುದೇ ಸಮಾಜವಿರಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೋಳಿ ಆಡುವ ನೆಪದಲ್ಲಿ ವಸೂಲಿ ದಂಧೆ