ನವದೆಹಲಿ: ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ (Global NCAP Crash Test) ಮಧ್ಯಮ ಗಾತ್ರದ ಸೆಡಾನ್ ಕಾರುಗಳಾದ ಫೋಕ್ಸ್‌ವ್ಯಾಗನ್ ವರ್ಟಸ್(Volkswagen Virtus) ಮತ್ತು ಸ್ಕೋಡಾ ಸ್ಲಾವಿಯಾ (Skoda Slavia) 5 ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ. ಗ್ಲೋಬಲ್ ಎನ್‌ಸಿಎಪಿ ಹೊಸ ಮಾನದಂಡಗಳ ಅಡಿಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಕಾರುಗಳು ಎಂಬ ಹೆಗ್ಗಳಿಕೆಯನ್ನೂ ವರ್ಟಸ್ ಮತ್ತು ಸ್ಲಾವಿಯಾ ಗಳಿಸಿವೆ.
ಸೇಫರ್ ಕಾರ್ಸ್ ಫಾರ್ ಇಂಡಿಯಾ ಅಭಿಯಾನದ (Safer cars for India) ಅಡಿಯಲ್ಲಿ ಗ್ಲೋಬಲ್ ಎನ್‌ಸಿಎಪಿ ವರ್ಟಸ್/ಸ್ಲಾವಿಯಾ ಕಾರನ್ನು ಕ್ರ್ಯಾಶ್ ಟೆಸ್ಟ್ ಮಾಡಿದೆ. ವಯಸ್ಕ ಸುರಕ್ಷತೆಯ ವಿಭಾಗ ಮತ್ತು ಮಕ್ಕಳ ಸುರಕ್ಷತಾ ವಿಭಾಗಗಳೆರಡರಲ್ಲೂ ಈ ಕಾರುಗಳು 5 ಸ್ಟಾರ್ ರೇಟಿಂಗ್ ಪಡೆದುಕೊಂಡು ಅತ್ಯಂತ ಸುರಕ್ಷಿತ ಸೆಡಾನ್ ಕಾರುಗಳು ಎನಿಸಿಕೊಂಡಿವೆ. ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 1 ಸ್ಟಾರ್ ಪಡೆದ ವ್ಯಾಗನ್ ಆರ್ – 2 ಸ್ಟಾರ್ ಪಡೆದ ಆಲ್ಟೊ K10
ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ವರ್ಟಸ್/ಸ್ಲಾವಿಯಾ ಆರ್ 34ಕ್ಕೆ 29.71 ಅಂಕಗಳನ್ನು ಪಡೆದರೆ, ಮಕ್ಕಳ ರಕ್ಷಣೆಯಲ್ಲಿ 49ಕ್ಕೆ 42 ಅಂಕಗಳನ್ನು ಪಡೆದುಕೊಂಡಿವೆ. ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾ ಕಾರುಗಳು ಮಾರುತಿ ಸುಜುಕಿ ಸಿಯಾಜ್, ಹುಂಡೈ ವರ್ನಾ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವುದಂತೂ ಖಚಿತ.
ಇದೇ ಸಮಯದಲ್ಲಿ ಗ್ಲೋಬಲ್ ಎನ್‌ಸಿಎಪಿ ಮಾರುತಿ ಸುಜುಕಿ ಕಂಪನಿಯ ವ್ಯಾಗನ್ ಆರ್ (Wagon R) ಮತ್ತು ಆಲ್ಟೊ K10 (Alto K10) ಕಾರುಗಳನ್ನು ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿದ್ದು, ಅದರ ಫಲಿತಾಂಶ ಹೀಗಿದೆ.
ವ್ಯಾಗನ್ ಆರ್, ವಯಸ್ಕ ಪ್ರಯಾಣಿಕರ ಸುರಕ್ಷತೆಗೆ 1 ಸ್ಟಾರ್ , ಮಕ್ಕಳ ಸುರಕ್ಷತೆ 0 ಸ್ಟಾರ್ ಪಡೆದಿದೆ. ಆಲ್ಟೊ K10, ವಯಸ್ಕ ಪ್ರಯಾಣಿಕರ ಸುರಕ್ಷತೆಗೆ 2 ಸ್ಟಾರ್ , ಮಕ್ಕಳ ಸುರಕ್ಷತೆ 0 ಸ್ಟಾರ್ ಪಡೆದಿದೆ. ಇದನ್ನೂ ಓದಿ: Twitter logo: ಟ್ವಿಟ್ಟರ್ ‘ನೀಲಿ ಹಕ್ಕಿ’ ನಾಯಿ ಮರಿಯಾಯ್ತು!