ಲಂಡನ್: ವಿಶ್ವದಾದ್ಯಂತ ಅನೇಕ ಕಂಪನಿಗಳು ವೆಚ್ಚ ಕಡಿತ ಹಾಗೂ ಇತರ ಕಾರಣಗಳನ್ನು ನೀಡಿ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿರುವುದು ಇತ್ತೀಚೆಗೆ ನಡೆಯುತ್ತಲೇ ಇದೆ. ಇದೀಗ ಬ್ರಿಟನ್ನಿನ ದೈತ್ಯ ವೊಡಾಫೋನ್ (Vodafone) ಸಂಸ್ಥೆಯ ಸಿಇಒ ಮಾರ್ಗರಿಟಾ ಡೆಲ್ಲಾ ವ್ಯಾಲೆ (Margherita Della Valle) ಮುಂದಿನ ಮೂರು ವರ್ಷಗಳಲ್ಲಿ 11 ಸಾವಿರ ಉದ್ಯೋಗ ಕಡಿತಗೊಳಿಸುವುದಾಗಿ (Layoff) ಹೇಳಿದ್ದಾರೆ.
ವೊಡಾಫೋನ್ ಸರಳ ವಾಣಿಜ್ಯ ಸಂಸ್ಥೆಯಾಗಿದ್ದು, ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸಲು ಬಯಸುತ್ತದೆ. ಜೊತೆಗೆ ತನ್ನ ಕಾರ್ಯಕ್ಷಮತೆ ಸಾಕಷ್ಟು ಉತ್ತಮವಾಗಿಲ್ಲ. ಸ್ಥಿರವಾಗಿ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಬದಲಾವಣೆಯಾಗಬೇಕಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಕಳೆದ ವರ್ಷ 1,04,000 ಉದ್ಯೋಗಿಗಳನ್ನು ಒಳಗೊಂಡಿದ್ದ ವೊಡಾಫೋನ್ ಸಂಸ್ಥೆಯಲ್ಲಿ ಜಾಗತಿಕವಾಗಿ ಶೇ.10 ರಷ್ಟು ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ಇದರಿಂದ ನಮ್ಮ ಆದ್ಯತೆಗಳೇನಿದ್ದರೂ ಮೊದಲು ಗ್ರಾಹಕರು ನಂತರ ಸರಳತೆ ಮತ್ತು ಕಂಪನಿಯ ಬೆಳವಣಿಗೆಯಾಗಿದೆ. ಹಾಗಾಗಿ ಸಂಸ್ಥೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಳಗೊಳಿಸಲು ಬಯಸುತ್ತೇವೆ. ನಮ್ಮ ಸ್ಪರ್ಧಾತ್ಮಕತೆಯನ್ನು ಮರಳಿ ಪಡೆಯಲು ಉದ್ಯೋಗ ಕಡಿತಗೊಳಿಸುತ್ತೇವೆ. ನಮ್ಮ ಗ್ರಾಹಕರು ನಿರೀಕ್ಷಿಸುವ ಮಟ್ಟಕ್ಕೆ ಗುಣಮಟ್ಟದ ಸೇವೆ ಒದಗಿಸಲು ಸಂಪನ್ಮೂಲ ಮರುಹಂಚಿಕೆ ಮಾಡುತ್ತೇವೆ ಎಂದು ಮಾರ್ಗರಿಟಾ ಡೆಲ್ಲಾ ವ್ಯಾಲೆ ಹೇಳಿದ್ದಾರೆ. ಇದನ್ನೂ ಓದಿ: ಮೊಬೈಲ್ ಫೋನ್ ಕಳೆದು ಹೋದ್ರೆ ಇನ್ನು ಚಿಂತಿಸಬೇಕಿಲ್ಲ – ಶೀಘ್ರವೇ ಕೇಂದ್ರ ತರಲಿದೆ ಟ್ರ್ಯಾಕಿಂಗ್ ಸಿಸ್ಟಮ್
Advertisement
Advertisement
ಈಗಾಗಲೇ ವಿವಿಧ ಜಾಗತಿಕ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನ ವಜಾಗೊಳಿಸಿದೆ. ಮೆಟಾ ಸಂಸ್ಥೆ ಎರಡು ಸುತ್ತಿನಲ್ಲಿ 15 ಸಾವಿರ ಉದ್ಯೋಗಿಗಳನ್ನ ವಜಾಗೊಳಿಸಿತ್ತು. ಅಮೆಜಾನ್ ಈ ಹಿಂದೆ 3 ತಿಂಗಳ ಅಂತರದಲ್ಲಿ 27 ಸಾವಿರ ಉದ್ಯೋಗಿಗಳನ್ನ ವಜಾಗೊಳಿಸಿತ್ತು. ಈ ಬೆನ್ನಲ್ಲೇ ಡಿಸ್ನಿ ಸಂಸ್ಥೆ ಸಹ 7 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಇತ್ತೀಚೆಗೆ ಹೇಳಿತ್ತು. ಇದನ್ನೂ ಓದಿ: ಅಮೆಜಾನ್‌ನಲ್ಲಿ 2ನೇ ಸುತ್ತಿನ ವಜಾ ಪ್ರಕ್ರಿಯೆ ಆರಂಭ – 3 ತಿಂಗಳೊಳಗೆ 27 ಸಾವಿರ ಮಂದಿ ಮನೆಗೆ