LatestMain PostNational

ನಟ ರಜನಿಕಾಂತ್‌ರನ್ನು ಭೇಟಿಯಾದ ಜಯಲಲಿತಾ ಆಪ್ತೆ ಶಶಿಕಲಾ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಅವರು ಇಂದು ನಟ ರಜನಿಕಾಂತ್‌ ಅವರನ್ನು ಭೇಟಿಯಾದರು.

ಚೆನ್ನೈನ ಪೊಯೆಸ್‌ ಗಾರ್ಡನ್‌ ನಿವಾಸದಲ್ಲಿ ರಜನಿಕಾಂತ್‌ ಅವರನ್ನು ಶಶಿಕಲಾ ಭೇಟಿಯಾದರು. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ವಿಜೇತರಾಗಿರುವ ರಜನಿ ಅವರನ್ನು ಶಶಿಕಲಾ ಅಭಿನಂದಿಸಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸ್ವಂತ ತಮ್ಮ‌‌ನನ್ನೇ ಸೋಲಿಸಿ ಬಿಜೆಪಿ ಗೆಲ್ಲಿಸಿದ್ದಾರೆ: ಬಾಲಚಂದ್ರ ಜಾರಕಿಹೊಳಿ

ಅಕ್ಟೋಬರ್‌ ತಿಂಗಳಲ್ಲಿ ರಜಿನಿಕಾಂತ್‌ ಅವರು ಕ್ಯಾರೊಟಾಯಿಡ್‌ ರಿವ್ಯಾಸ್ಕುಲರೈಷೇಷನ್‌ ಚಿಕಿತ್ಸೆಗೆ ಒಳಗಾಗಿದ್ದರು. ಅದಕ್ಕೂ ಮುನ್ನ ರಜನಿ ರಾಜಕೀಯಕ್ಕೆ ಬರುತ್ತಾರೆಂಬ ಸುದ್ದಿ ಹರಡಿತ್ತು. ಅನಾರೋಗ್ಯದ ಕಾರಣ ಅವರು ರಾಜಕೀಯದಿಂದ ಹಿಂದೆ ಸರಿದರು.

ಆಂತರಿಕ ಅಧಿಕಾರದ ಒಳಜಗಳದ ನಂತರ ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ಶಶಿಕಲಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರ ಬೆಂಗಳೂರಿನ ಜೈಲಿನಿಂದ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೃದು ಧೋರಣೆ ತೋರಿದ ನಿರಾಣಿ

Leave a Reply

Your email address will not be published.

Back to top button