ನವದೆಹಲಿ: ವಿವೋದ ನೂತನ ವಿ9 ಆವೃತ್ತಿಯ ಸ್ಮಾರ್ಟ್ ಫೋನ್ ಬೆಲೆ ದಿಢೀರ್ ಇಳಿಕೆಯಾಗಿದೆ. ಐಪಿಎಲ್ ವೇಳೆ ಏಪ್ರಿಲ್ ತಿಂಗಳಿನಲ್ಲಿ ಫುಲ್ ಸ್ಕ್ರೀನ್ ಹೊಂದಿರುವ ಫೋನ್ 19,990 ರೂ.ಗೆ ಬಿಡುಗಡೆಯಾಗಿತ್ತು. ಈಗ ಮೂರು ಸಾವಿರ ರೂ. ಕಡಿಮೆಯಾಗಿದ್ದು 16,990 ರೂ. ನಿಗದಿಯಾಗಿದೆ.
ವಿವೋ ವಿ9 ಮೊಬೈಲ್ ಸದ್ಯ ಆನ್‍ಲೈನ್ ನ www.tatacliq.com ವೆಬ್‍ಸೈಟ್ ಹಾಗೂ ಆಫ್ ಲೈನ್ ನಲ್ಲಿ 16,990 ರೂಪಾಯಿಗಳಿಗೆ ಲಭ್ಯವಿದ್ದು, ಗೋಲ್ಡ್, ಬ್ಲಾಕ್, ಮ್ಯಾಟ್ ರೆಡ್ ಮತ್ತು ಸಫೈರ್ ಬ್ಲೂ ಬಣ್ಣಗಳಲ್ಲಿ ಸಿಗಲಿದೆ.
Advertisement
Advertisement
ವಿವೋ 9ಎನ್ ಸ್ಮಾರ್ಟ್ ಫೋನ್ ನ ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ: 154.8 x 75.1 x 7.9 ಮಿ.ಮೀ. ಗಾತ್ರ, 150 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 6.3 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080X2280 ಪಿಕ್ಸೆಲ್, 19:9 ಅನುಪಾತ, 400ಪಿಪಿಐ)
Advertisement
ಪ್ಲಾಟ್ ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಪ್ರೋ, ಸ್ನಾಪ್ ಡ್ರಾಗನ್ 626, ಆಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹಟ್ರ್ಸ್ ಸ್ಪೀಡ್, 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.
Advertisement
ಕ್ಯಾಮೆರಾ:
ಮುಂಭಾಗ 24ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 16+5 ಎಂಪಿ ಡ್ಯುಯಲ್ ಕ್ಯಾಮೆರಾ, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್.
ಇತರೆ ಫೀಚರ್ ಗಳು: ಸ್ಕ್ರೀನ್ ನಲ್ಲಿಯೇ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿದ್ದು, ಫೋಟೋ ಅನ್ ಲಾಕಿಂಗ್, 3,260 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.