ಬಾಲಿವುಡ್ ನ ಹೆಸರಾಂತ ಕಲಾತ್ಮಕ ಸಿನಿಮಾಗಳ ನಿರ್ದೇಶಕ ಸಯಿದ್ ಅಖ್ತರ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದರು. ಈ ಸಿನಿಮಾವನ್ನು ಅವರು ಕಸಕ್ಕೆ ಹೋಲಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ನಿನ್ನೆಯಿಂದ ಇದು ಚರ್ಚೆ ಆಗುತ್ತಿದ್ದರೂ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಟ್ವಿಟ್ಟರ್ ಮೂಲಕ ಉತ್ತರಿಸಿರುವ ವಿವೇಕ್, ‘ಸಯಿದ್ ಅಖ್ತರ್ ಸರ್, ನಮಸ್ಕಾರ್. ದೆಹಲಿ ಫೈಲ್ಸ್ ಮುಗಿದ ನಂತರ ಮತ್ತೆ ಭೇಟಿ ಆಗೋಣ’ ಎಂದಷ್ಟೇ ಹೇಳಿ ಕೈ ತೊಳೆದುಕೊಂಡಿದ್ದಾರೆ.
Advertisement
ಬಾಲಿವುಡ್ ಸಿನಿಮಾ ರಂಗ ಕಂಡ ಪ್ರತಿಭಾವಂತ ನಿರ್ದೇಶಕ ಸಯಿದ್ ಅಖ್ತರ್. ಸಾಕಷ್ಟು ಕಲಾತ್ಮಕ ಸಿನಿಮಾಗಳನ್ನು ಕೊಟ್ಟಿರುವ ಹೆಗ್ಗಳಿಕೆ ಇವರದ್ದು. ಅಲ್ಲದೇ, ಟೆಲಿವಿಷನ್ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಹಿರಿಯ ನಿರ್ದೇಶಕರು ಕೂಡ. ಹಾಗಾಗಿ ವಿವೇಕ್ ಅಗ್ನಿಹೋತ್ರಿ ಸೌಮ್ಯವಾಗಿಯೇ ಉತ್ತರವನ್ನು ಕೊಟ್ಟಿದ್ದಾರೆ. ಸದ್ಯ ‘ದಿ ದೆಹಲಿ ಫೈಲ್ಸ್’ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಮುಗಿದ ನಂತರ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ
Advertisement
Advertisement
ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮರೆತು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ಹೊಸ ಸಿನಿಮಾದ ಕೆಲಸವನ್ನೂ ಅವರು ಶುರು ಮಾಡಿದ್ದಾರೆ. ಆದರೆ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗೆಗಿನ ಕೆಲವರ ಅಸಮಾಧಾನ ಮಾತ್ರ ಇನ್ನೂ ನಿಂತಿಲ್ಲ. ಗೋವಾದಲ್ಲಿ ನಡೆದ ಚಿತ್ರೋತ್ಸವದಲ್ಲಿ ಜ್ಯೂರಿಯಾಗಿದ್ದ ನಡಾವ್ ಕಟು ಟೀಕೆ ಮಾಡಿದ್ದರು. ಅದು ಸಾಕಷ್ಟು ಚರ್ಚೆಯನ್ನೂ ಹುಟ್ಟುಹಾಕಿತ್ತು.
Advertisement
ನಿರ್ದೇಶಕ ಸಯಿದ್ ಅಖ್ತರ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಒಂದು ಕಸ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ‘ಕಾಶ್ಮೀರದಲ್ಲಿ ಕಾಶ್ಮೀರ ಪಂಡಿತರ ಮೇಲೆ ಹಲ್ಲೆ ಆಗಿದ್ದು, ಮಾರಣಹೋಮ ನಡೆದಿದ್ದು ಎಲ್ಲವೂ ನಿಜ. ಅದನ್ನು ನಾನು ಸುಳ್ಳು ಅಂತ ಹೇಳಲಾರೆ. ಪಂಡಿತರ ರೀತಿಯಲ್ಲೇ ಮುಸ್ಲಿಂ ಜನರದ್ದು ಹತ್ಯೆಯಾಗಿದೆ. ಅವರೂ ಕಿರುಕುಳವನ್ನೂ ಅನುಭವಿಸಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಅದನ್ನು ತೋರಿಸಿಲ್ಲ. ಸತ್ಯವನ್ನು ಮುಚ್ಚಿಟ್ಟು ತಮಗೆ ತೋಚಿದಂತೆ ಸಿನಿಮಾ ಮಾಡಿದ್ದಾರೆ. ಹಾಗಾಗಿ ಅದು ಕಸ ಎಂದು ನನಗೆ ಅನಿಸಿದೆ’ ಎಂದಿದ್ದರು.