ಬೆಂಗಳೂರು: ಪೊಲೀಸರಿಗೆ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದು ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸುಪಾರಿ ಪ್ರಕರಣ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆಗೆ ಹಾಜರಾಗಿದ್ದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಾಕ್ಷಿದಾರರ ಮುಂದೆ ಪೊಲೀಸರು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಸರಿಯಾದ ದಿಕ್ಕಿನಲ್ಲಿ ತನಿಖೆಯಾಗಬೇಕೆಂದು ಹೇಳಿದ್ದೇನೆ.
Advertisement
Advertisement
ಪೆನ್ ಡ್ರೈವ್ ನೋಡಿದಾಗ ಏನೇನೋ ವ್ಯವಹಾರ ಇತ್ತು. ಹೀಗಾಗಿ ರಾತ್ರಿಯೆಲ್ಲಾ ಕುಳಿತುಕೊಂಡು ಸುಪಾರಿ ವಿಚಾರದ ಮಾತುಕತೆಯನ್ನು ಮಾತ್ರ ಎಡಿಟ್ ಮಾಡಿ ಎಲ್ಲಾ ಕಡೆ ಕೊಟ್ಟಿದ್ದೇವು. ಇದೀಗ ರಾ ವೀಡಿಯೋ ಫೂಟೇಜ್ ಅನ್ನು ಪೊಲೀಸರಿಗೆ ನೀಡಲಾಗಿದೆ. ಕುಳ್ಳ ದೇವರಾಜ್ ಕ್ಷಮಾಪಣೆ ಕೇಳೀದ ಪೆನ್ ಡ್ರೈವ್ ಸಹ ನೀಡಿದ್ದೇನೆ. ಮುಂದೆ ವಿಚಾರಣೆಗೆ ಕರೆದಾಗ ಬರಬೇಕೆಂದು ಸೂಚಿಸಿದ್ದಾರೆ. ಮತ್ತೆ ವಿಚಾರಣೆ ಕರೆದರೆ ಬಂದು ಸಹಕಾರ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಸೇವೆಯನ್ನು ಸಹಿಸಲಾಗದೆ ಕೊಲೆಗೆ ಸಂಚು: ಎಸ್.ಆರ್ ವಿಶ್ವನಾಥ್
Advertisement
Advertisement
ಅವನೇ ಸುಳ್ಳು, ಮಾತಾಡುವುದರಲ್ಲಿ ನಿಸ್ಸೀಮ. ಬಹಳ ದಿನದಿಂದ ಇದೆಲ್ಲಾ ನಡೀತಿದೆ. ನಾನು ಕೂಡಾ ಅಸಡ್ಡೆ ಮಾಡಿದೆ ಅನಿಸುತ್ತದೆ. ಆಡಿಯೋ ಕೇಳಿದ ಮೇಲೆಯೇ ಗೊತ್ತಾಗಿದ್ದು, ಏನೂ ಗೊತ್ತಿಲ್ಲದೇ ದೂರು ಕೊಡಲು ಸಾಧ್ಯವಿಲ್ಲ. ಮೊನ್ನೆ ರಾತ್ರಿ ವಿಡಿಯೋ ಸಿಕ್ಕಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಕುರಿತಂತೆ ಚರ್ಚೆ ಮಾಡೋಣ ಎಂದು ಸಿಎಂ ಕೂಡಾ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್
S.R. Vishwanath, Rajanukunte Police Station, Inquiry, Bengaluru