ಬೆಂಗಳೂರು: 2025-26ನೇ ಸಾಲಿನಲ್ಲಿ ಡಿಪ್ಲೋಮಾ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶುಲ್ಕ ಪಾವತಿಸುವಂತೆ ಕಾಲೇಜುಗಳಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಸೂಚಿಸಿದೆ.
ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಅನುಮೋದಿತ ಪಟ್ಟಿ ಹಾಗೂ ವಿಶ್ವವಿದ್ಯಾಲಯದ ಶುಲ್ಕವನ್ನು ಪಾವತಿಸಿದ ರಶೀದಿಯನ್ನು ವಿಟಿಯುಗೆ ಸಲ್ಲಿಸಲು ತಿಳಿಸಿದೆ. ಇದನ್ನೂ ಓದಿ: ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಉಗ್ರರ ಬಗ್ಗೆ ಏನ್ ಚರ್ಚೆ ಮಾಡ್ತೀರಾ? – HDK ಕಿಡಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶುಲ್ಕವನ್ನು ಕೆಇಎ ಆಯಾ ಕಾಲೇಜುಗಳಿಗೆ ಪಾವತಿಸಿರುತ್ತದೆ. ಈ ಮೊತ್ತವನ್ನು ಕಾಲೇಜುಗಳು ವಿಟಿಯು ಖಾತೆಗೆ ಪಾವತಿಸಬೇಕೆಂದು ಕೋರಿದೆ. ಕೆಇಎ ಮತ್ತು ಮ್ಯಾನೇಜ್‌ಮೆಂಟ್ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳ ಮೊತ್ತವನ್ನು ಪಾವತಿಸಲು ಸೂಚಿಸಿದೆ.
ವಿಟಿಯು ವಿತ್ತಾಧಿಕಾರಿ ಖಾತೆಗೆ ಆಡಳಿತ ವಿಭಾಗಕ್ಕೆ ಸಂಬಂಧಿತ ಶುಲ್ಕವನ್ನು ಮಾತ್ರ ಪಾವತಿಸಲು ಸೂಚಿಸಿದ್ದು, ಪರೀಕ್ಷಾ ವಿಭಾಗದ ಶುಲ್ಕವನ್ನು ಪಾವತಿಸಲು ಪರೀಕ್ಷಾ ವಿಭಾಗವನ್ನು ಸಂಪರ್ಕಿಸಬೇಕೆಂದು ಕೋರಿದೆ. ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿಸದೇ ಇದ್ದ ಪಕ್ಷದಲ್ಲಿ ಅಂತಹ ವಿದ್ಯಾರ್ಥಿಗಳ ಪಟ್ಟಿಯನ್ನು ಸ್ವೀಕರಿಸಲಾಗುವುದಿಲ್ಲವೆಂದು ವಿಟಿಯು ಸ್ಪಷ್ಟಪಡಿಸಿದೆ. ಹೆಚ್ಚಿನ ಮಾಹಿತಿಗೆ ವಿಟಿಯು ವೆಬ್‌ಸೈಟ್ https://vtu.ac.in/ ನೋಡುವಂತೆ ತಿಳಿಸಿದೆ.ಇದನ್ನೂ ಓದಿ: ಸರ್ಕಾರಿ ಕೆಲಸದ ಆಮಿಷ – ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಗೆಳೆಯನಿಂದ ಯುವತಿಗೆ 26 ಲಕ್ಷ ವಂಚನೆ

