ಹುಲಿ ಉಗುರಿನ ಸಂಕಷ್ಟ- ದರ್ಶನ್ ಮನೆಗೆ ಅರಣ್ಯಾಧಿಕಾರಿಗಳ ಭೇಟಿ

Public TV
1 Min Read
darshan 3

ಹುಲಿ ಉಗುರಿನ ಪೆಂಡೆಂಟ್ ಹಾಕಿದ್ದರು ಎನ್ನುವ ಕಾರಣಕ್ಕಾಗಿ ‘ಬಿಗ್ ಬಾಸ್’ (Bigg Boss Kannada) ಸ್ಪರ್ಧಿ ವರ್ತೂರ್ ಸಂತೋಷ್ (Varthur santhosh) ಮೊನ್ನೆಯಷ್ಟೇ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಅವರಿಗೂ ಹುಲಿ ಉಗುರಿನ ಸಂಕಷ್ಟ ಎದುರಾಗಿದೆ. ಆರ್‌ಆರ್ ನಗರದ ದರ್ಶನ್ (Darshan) ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಭೇಟಿಯಾದ ನಟಿ ಕಂಗನಾ ರಣಾವತ್

ವರ್ತೂರ್ ಸಂತೋಷ್ ಬಂಧನವಾಗ್ತಿದ್ದಂತೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿಗೂ ಹುಲಿ ಉಗುರಿನ ಕಂಟಕ ಎದುರಾಗಿದೆ. ದರ್ಶನ್ ಕೂಡ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋ ವೈರಲ್ ಆಗಿತ್ತು. ಈ ನಿಮಿತ್ತ ನಟನ ಮನೆಗೆ ಮೂವರು ಅಧಿಕಾರಿಗಳಿಂದ ಹುಲಿ ಉಗುರಿಗಾಗಿ ಭೇಟಿ ನೀಡಿದ್ದಾರೆ. ಸದ್ಯ ದರ್ಶನ್ ಮೈಸೂರಿನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್‌ಗೆ ಅರಣ್ಯಾಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ದರ್ಶನ್ ಬಳಿಕ ರಾಜ್ಯಸಭಾ ಸದಸ್ಯ ಜಗ್ಗೇಶ್ ನಿವಾಸಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿದ್ದಾರೆ. ಸದ್ಯ ಜಗ್ಗೇಶ್ ಹುಟ್ಟುರಿನಲ್ಲಿದ್ದಾರೆ. ಈ ಹಿನ್ನೆಲೆ ಅವರ ಪತ್ನಿ ಪರಿಮಳರಿಗೆ ನೋಟೀಸ್ ಕೊಡುವ ಸಾಧ್ಯತೆಯಿದೆ. ಇನ್ನೂ ಹುಲಿಯುಗುರಿನ ಪೆಂಡೆಂಟ್ ಮನೆಯಲ್ಲಿದ್ದರೆ ವಶಕ್ಕೆ ಪಡೆಯುತ್ತಾರೆ. ಒಂದು ವೇಳೆ ಮನೆಯಲ್ಲಿ ಪೆಂಡೆಂಟ್ ಇಲ್ಲ ಅಂದ್ರೆ ಆ ಬಗ್ಗೆ ಮಾಹಿತಿ ಕಲೆಹಾಕಲಿದ್ದಾರೆ. ಅಧಿಕಾರಿಗಳು.

Share This Article