ದಾವಣಗೆರೆ: ಶಾಲಾ ಪಠ್ಯದಲ್ಲಿ (Text Book) ಭಗವದ್ಗೀತೆ (Bhagavad Gita) ಬರಬೇಕು. ಎಲ್ಲಾ ಶಾಲೆಗಳಲ್ಲೂ ಕಡ್ಡಾಯಗೊಳಿಸಬೇಕು ಎಂಬ ಸರ್ಕಾರದ ನಿರ್ಧಾರಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಬೆಂಬಲ ಸೂಚಿಸಿದರು.
ದಾವಣಗೆರೆ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ-2ರ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎನ್ನುವ ಚರ್ಚೆಯಾಗುತ್ತಿದೆ. ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು. ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರ ಜೊತೆಗೆ ಅದನ್ನ ಕಡ್ಡಾಯವಾಗಿ ಮಕ್ಕಳಿಗೆ ಕಲಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹೈದರಾಬಾದ್‌ನಲ್ಲಿ ದೇಶದ ಮೊದಲ ಚಿನ್ನದ ATM ಉದ್ಘಾಟನೆ – ಇಲ್ಲಿ ಹಣ ಅಲ್ಲ, ಚಿನ್ನ ಡ್ರಾ ಮಾಡ್ಬೋದು!
Advertisement
Advertisement
ಸಮಾಜದ ಸ್ಥಿತಿಗತಿಗಳನ್ನು, ಆಗುಹೋಗುಗಳನ್ನು ಗಮನಿಸಿದರೆ ಮನಸ್ಸುಗಳು ಅನೇಕ ರೀತಿಯಲ್ಲಿ ಒಡೆದು ಹೋಗಿವೆ. ಭಾಷೆಗಾಗಿ, ಗಡಿಗಳಿಗಾಗಿ, ನೀರಿಗಾಗಿ, ಆಹಾರ ಪದ್ಧತಿಗಳಿಗಾಗಿ, ಪ್ರತಿಯೊಂದರಲ್ಲೂ ಭಿನ್ನತೆಗಳನ್ನು ಕಾಣುತ್ತಿದ್ದೇವೆ. ನಮ್ಮಲ್ಲಿ ಏಕತೆ ಬೆಳೆಯಬೇಕಾದರೆ ಅದಕ್ಕೆ ಭಗವದ್ಗೀತೆಯೇ ಮೂಲ ಆಧಾರವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್‌ಗೆ ಕಪಾಳಮೋಕ್ಷ – ಬಿಜೆಪಿ ಮಾಜಿ ಸಂಸದೆ ವಿರುದ್ಧ ಎಫ್‌ಐಆರ್