ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ನಿಧನದಿಂದ ಮುಂದೂಡಲಾಗಿದ್ದ ವಿಎಚ್‍ಪಿ ಆಯೋಜಿಸಿದ್ದ ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಾಣ ಜನಾಗ್ರಹ ಸಮಾವೇಶ ಇಂದು ನಡೆಯಲಿದೆ. ಸಮಾವೇಶದಲ್ಲಿ ರಾಜ್ಯದ ಪ್ರಮುಖ ಮಠಾಧೀಶರು ಭಾಗವಹಿಸಲಿದ್ದಾರೆ.
ಬಿಜೆಪಿ ಚುನಾವಣೆಯ ಹಿನ್ನೆಲೆ ಉರುಳಿಸಿರುವ ದಾಳ ಅನ್ನೋ ಆರೋಪ ಇದ್ರೂ ದೇಶದ ಹಲವು ಕಡೆ ಜನಾಗ್ರಹ ಸಮಾವೇಶ ನಡೆದಿದೆ. ಇಂದು ಸಮಾವೇಶಕ್ಕಾಗಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಲ್ಲಾ ಸಿದ್ಧತೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಮೇಲೆ ರಾಮಮಂದಿರ ವಿಚಾರವಾಗಿ ಒತ್ತಡ ತರುವ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ 25ರಂದು ಹಿಂದೂ ಸಮಾವೇಶ ನಡೆದಿತ್ತು.
Advertisement
Advertisement
ಬೆಂಗಳೂರಿನಲ್ಲಿ ಕನ್ನಡ ಹಿರಿಯ ನಟ ಅಂಬರೀಶ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಜನಾಗ್ರಹ ಸಮಾವೇಶವನ್ನ ಡಿಸೆಂಬರ್ 2 ಕ್ಕೆ ಮುಂದೂಡಲಾಗಿತ್ತು. ಇಂದು ಸಮಾವೇಶಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಇಂದಿನ ಸಮಾವೇಶದಲ್ಲಿ ಪೇಜಾವರ ಶ್ರೀ, ನಿರ್ಮಾಲಾನಂದ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಸುಮಾರು 30 ಸಾವಿರಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
Advertisement
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸುಮಾರು 25 ಸಾವಿರಕ್ಕಿಂತ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹಲವು ಜಿಲ್ಲೆಗಳಿಂದ ಜನ ಸಮಾವೇಶಕ್ಕೆ ಆಗಮಿಸುತ್ತಿದ್ದಾರಂತೆ. ಒಟ್ಟಾರೆ ಲೋಕಕದನಕ್ಕೂ ಮೊದಲು ಶ್ರೀರಾಮ ಮಂದಿರ ಕಟ್ಟಲೇಬೆಕು ಎಂದು ನಡೆಯುತ್ತಿರುವ ಜನಾಗ್ರಹ ಸಮಾವೇಶ ಯಶಸ್ವಿ ಆಗುತ್ತಾ ಇಲ್ವಾ ಅನ್ನೊದನ್ನ ಕಾದು ನೋಡಬೇಕು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv