ಉಡುಪಿ: ಕೃಷ್ಣನೂರು ಉಡುಪಿಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಷ್ಣುವರ್ಧನ್ ಐಪಿಎಸ್ ಅಧಿಕಾರ ವಹಿಸಿಕೊಂಡಿದ್ದಾರೆ. ಎಸ್‍ಪಿ ನಿಶಾ ಜೇಮ್ಸ್ ಅವರನ್ನು ಭಡ್ತಿಕೊಟ್ಟು ಬೆಂಗಳೂರಿಗೆ ವರ್ಗ ಮಾಡಲಾಗಿದೆ.
ಎಸ್‍ಪಿ ವಿಷ್ಣುವರ್ಧನ್ ಅವರು ಮೂರು ವರ್ಷಗಳ ಹಿಂದೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಒಂದೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಆ ಮೊದಲು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಉಡುಪಿಯಿಂದ ವರ್ಗಾವಣೆಗೊಂಡ ಬಳಿಕ ಮೈಸೂರು ಎಸ್‍ಪಿಯಾಗಿ ಸೇವೆ ಸಲ್ಲಿಸಿದ್ದರು.
Advertisement
Advertisement
ಎಸ್‍ಪಿ ನಿಶಾ ಜೇಮ್ಸ್ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕರಾಗಿ ಭಡ್ತಿ ನೀಡಿ ವರ್ಗಾವಣೆಗೊಳಿಸಿ ಸರ್ಕಾರ ಡಿ.31ರಂದು ಆದೇಶ ಹೊರಡಿಸಿತ್ತು. ನಂತರ ಅಕ್ಷಯ್ ಹಾಕೆ ಮಚ್ಚಿಂದ್ರ ಅವರಿಗೆ ಭಡ್ತಿ ನೀಡಿ ಉಡುಪಿ ಜಿಲ್ಲೆಯ ನೂತನ ಎಸ್‍ಪಿಯಾಗಿ ಸರ್ಕಾರ ಆದೇಶಿಸಿತ್ತು.
Advertisement
ಒಂದೇ ದಿನದಲ್ಲಿ ಹೊಸ ಎಸ್‍ಪಿಯನ್ನು ಬದಲಾಯಿಸಲಾಗಿದೆ. ರಾಜಕೀಯ ಪ್ರಭಾವ ಬಳಸಿ ಗೃಹ ಸಚಿವರ ಉಸ್ತುವಾರಿ ಜಿಲ್ಲೆಗೆ ಎಸ್‍ಪಿ ವಿಷ್ಣುವರ್ಧನ್ ಅವರನ್ನು ನೇಮಕ ಮಾಡಲಾಗಿದೆ.