ಡಾ. ವಿಷ್ಣುವರ್ಧನ್ (Vishnuvardhan) ಅಭಿಮಾನ ಸ್ಮಾರಕಕ್ಕೆ ಚಾಲನೆ ಸಿಕ್ಕಿದೆ. ಕೆಂಗೇರಿ (Kengeri) ಬಳಿ ಅರ್ಧ ಎಕರೆ ಜಮೀನು ಖರೀದಿಸಿರುವ ನಟ ಸುದೀಪ್, ಆ ಜಮೀನನ್ನು ವಿಷ್ಣು ಸ್ಮಾರಕ ಮಾಡಲು ಹೊರಟಿದ್ದಾರೆ. ಅದಕ್ಕೆ ವೀರಕಪುತ್ರ ಶ್ರೀನಿವಾಸ್ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಇದೀಗ ಪುತ್ಥಳಿ ನಿರ್ಮಾಣಕ್ಕೆ ಅಡ್ವಾನ್ಸ್ ಕೊಡುವ ಮೂಲಕ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಅತಿ ದೊಡ್ಡ ಪ್ಲಾನ್ ಮಾಡಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿದ್ದ (Abhiman Studio) ದಾದಾ ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಇದೀಗ ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಅಭಿಮಾನಿಗಳು ಮುಂದಾಗಿದ್ದಾರೆ. ಸೆಪ್ಟೆಂಬರ್ 18ರಂದು ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಇದೇ ದಿನದಂದು ಮಹತ್ವದ ಕೆಲಸಕ್ಕೆ ದಾದಾರ ಫ್ಯಾನ್ಸ್ ಮುಂದಾಗುತ್ತಿದ್ದಾರೆ. ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕೆ 48.88 ಕೋಟಿ – ತಮನ್ನಾಗೆ 6.20 ಕೋಟಿ, ಯಾರಿಗೆ ಎಷ್ಟು?
ಕಿಚ್ಚನಿಂದ ಅನಾವರಣ
ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಹೇಳಿಕೇಳಿ ಕಿಚ್ಚ ವಿಷ್ಣುದಾದಾರ ಅಪ್ಪಟ ಅಭಿಮಾನಿ. ಸುದೀಪ್ ಅವರ ಹುಟ್ಟುಹಬ್ಬದಂದೇ ಯಜಮಾನರ ಸ್ಮಾರಕದ ಬ್ಲ್ಯೂಪ್ರಿಂಟ್ ನ್ನು ಸ್ವತಃ ಕಿಚ್ಚ ಅನಾವರಣ ಮಾಡಲಿದ್ದಾರೆ. ಸೆಪ್ಟೆಂಬರ್ 18ರಂದು ದಾದಾ ಬರ್ತಡೇ ದಿನವೇ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು. ಕೆಂಗೇರಿ ಬಳಿ ನಿರ್ಮಾಣ ಆಗುವ ಸ್ಮಾರಕ, ಅಭಿಮಾನ್ ಸ್ಟುಡಿಯೋ ಪುಣ್ಯಭೂಮಿಗೆ ಸಮ ಅಲ್ಲ ಅನ್ನುವುದನ್ನು ವೀರಕಪುತ್ರ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಇದೇ 28 ರಂದು ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಅನುಶ್ರೀ
ಈ ವೇಳೆ ಮಾತನಾಡಿದ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಅಮೃತವರ್ಷ ಆಚರಿಸಲು ಮೂರು ವರ್ಷದಿಂದ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ. ಅದೇ ದಿನದಂದು ಸ್ಮಾರಕ ಕೆಲಸ ನಿರ್ಮಾಣ ಕೆಲಸ ಆರಂಭಿಸುತ್ತಿದ್ದೇವೆ. ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಸರ್ ಬರ್ತಡೇ ದಿನದಂದು ಸ್ಮಾರಕ ಹೇಗಿರಲಿದೆ ಎಂಬ ಮಾಡೆಲ್ ಪರಿಚಯಿಸುತ್ತೇವೆ. ಸೆಪ್ಟೆಂಬರ್ 18ಕ್ಕೆ ಸ್ಮಾರಕಕ್ಕೆ ಅಡಿಗಲ್ಲು ಹಾಕುತ್ತೇವೆ. ಇದು ಪುಣ್ಯಭೂಮಿಗೆ ಸಮ ಎಂದು ವಾದ ಮಾಡಲು ಹೋಗುವುದಿಲ್ಲ. ಮೈಸೂರಿನಲ್ಲಿರುವ ಸ್ಮಾರಕಕ್ಕೆ ಪ್ಯಾರೆಲ್ ಎಂದು ಹೇಳುವುದಿಲ್ಲ. ಇದು ಅಸಂಖ್ಯಾತ ಭಾವನೆ ಬೆಸೆದ ಜಾಗ ಇದು. ಪುಣ್ಯಭೂಮಿ ಉಳಿಸಿಕೊಳ್ಳುತ್ತೇವೆ. ಅದಕ್ಕಾಗಿ ಹೋರಾಟ ಮಾಡುತ್ತೇವೆ. ಕುಟುಂಬದವರು ನಿನ್ನೆ ಹೇಳಿದ್ದಾರೆ. ನೀವೆಲ್ಲರೂ ನಿರ್ಧಾರ ಮಾಡಿಕೊಂಡು ಬನ್ನಿ ಎಂದಿದ್ದಾರೆ. ಅದಕ್ಕಾಗಿ ರೂಪುರೇಷೆ ಸಿದ್ದ ಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ದಾದಾ ಅವರ ದರ್ಶನ ಕೇಂದ್ರ ಮಾಡುತ್ತೇವೆ. ಅದು ಅರ್ಥಪೂರ್ಣ ಕೆಲಸಕ್ಕೆ ವೇದಿಕೆಯಾಗಲಿದೆ ಎಂಬುದನ್ನು ಸೆಪ್ಟೆಂಬರ್ 2ಕ್ಕೆ ಮಾಹಿತಿ ನೀಡುತ್ತೇನೆ ಎಂದರು.
ಯಜಮಾನರ ಮಹೋತ್ಸವ
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಯಜಮಾನರ ಅಮೃತ ಮಹೋತ್ಸವನ್ನ ಒಂದು ದಿನ ಮಾಡೋಕೆ ಪ್ಲಾನ್ ಮಾಡಲಾಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಈ ಸಂಭ್ರಮ ಮಾಡಲಾಗುತ್ತಿದೆ. ಈ ಒಂದು ಅಮೃತ ಮಹೋತ್ಸವದಲ್ಲಿ ಇಡೀ ಇಂಡಸ್ಟ್ರಿ ಭಾಗಿ ಆಗಲಿದೆ ಅಂತಲೂ ಹೇಳಬಹುದು.