ಹೈದರಾಬಾದ್: ಅಂಕಲ್ ಒಬ್ಬರು ಡ್ಯಾನ್ಸ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಬೆನ್ನಲ್ಲೇ ಆಂಧ್ರಪ್ರದೇಶದ ವೈದ್ಯರೊಬ್ಬರು ತೆಲಗು ನಟ ಅಕ್ಕಿನೇನಿ ನಾಗೇಶ್ವರ್ ರಾವ್ ಅವರಂತೆ ಸ್ಟೆಪ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಯ (ಕೆಜಿಎಚ್) ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಕೆ ಸೂರ್ಯನಾರಾಯಣ ಅವರು ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಆಗಿದೆ. ಕೆಜಿಎಚ್‍ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವೈದ್ಯರ ಸೂರ್ಯನಾರಾಯಣ ಅವರು ಡ್ಯಾನ್ಸ್ ಮಾಡಿದ್ದಾರೆ. ಇದನ್ನು ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ವಯಸ್ಸು ನಂಬರ್ ಅಷ್ಟೇ ಎನ್ನುವಂತೆ ಅಂಕಲ್ ಹಾಕಿದ್ರು ಸಖತ್ ಸ್ಟೆಪ್- ವಿಡಿಯೋ ವೈರಲ್
Advertisement
This doctor from KGH, Visakhapatnam took out time from his routine patients & operations on Independence day to entertain his staff, patients and visitors. Great show of talent. @drharshvardhan @MoHFW_INDIA@AndhraPradeshCM@iamnagarjuna@amalaakkineni1 pic.twitter.com/dL8DG4OYhe
— B T Srinivasan (@srinivasanBT) August 16, 2019
Advertisement
ದಿವಂಗತ ನಟ ಎ.ನಾಗೇಶ್ವರ ರಾವ್ ಅವರ ಪ್ರಸಿದ್ಧ ತೆಲುಗು ಗೀತೆಗಳಿಗೆ ಡಾ.ಸೂರ್ಯನಾರಾಯಣ್ ನೃತ್ಯ ಮಾಡಿದ್ದಾರೆ. ನಾಗೇಶ್ವರ್ ಅವರನ್ನು ಅನುಕರಣೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಹಾಗೂ ಸಹೋದ್ಯೋಗಿಗಳನ್ನು ಮಂತ್ರಮುಗ್ಧಗೊಳಿಸಿದರು.
Advertisement
ಈ ಕುರಿತು ಮಾತನಾಡಿದ ಅವರು, ನಾನು ಎ.ನಾಗೇಶ್ವರ ರಾವ್ ಅವರ ಅಭಿಮಾನಿ. ನಾನು ಹಲವು ವರ್ಷಗಳಿಂದ ನೃತ್ಯ ಮಾಡುತ್ತಿದ್ದೇನೆ. 11ನೇ ವಯಸ್ಸಿನಿಂದಲೂ ನಾಗೇಶ್ವರ್ ಅವರನ್ನು ಅನುಕರಣೆ ಮಾಡುತ್ತಾ ಬೆಳೆದೆ. 200ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದೇನೆ. 1996ರಲ್ಲಿ ಚೆನ್ನೈನಲ್ಲಿ ನೃತ್ಯ ಪ್ರದರ್ಶನಕ್ಕೆ ಆಯ್ಕೆಯಾಗಿದ್ದೆ. ಆದರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಗೇಶ್ವರ್ ಅವರು ವಿಮಾನ ಪ್ರಯಾಣ ಕೈಗೊಂಡಿದ್ದರಿಂದ ನಿಲ್ದಾಣಕ್ಕೆ ಬೇಗ ಹೋದರು. ಹೀಗಾಗಿ ನನ್ನ ಡ್ಯಾನ್ಸ್ ಅನ್ನು ಅವರು ನೋಡಲಿಲ್ಲ ಎಂದು ನೆನೆದಿದ್ದಾರೆ.
Advertisement
ನಾಗೇಶ್ವರ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಅವರು ನನ್ನ ನೃತ್ಯವನ್ನು ನೋಡಿ ಸಂತೋಷಗೊಂಡರು. ನೃತ್ಯವನ್ನು ಅಷ್ಟು ಸುಲಭವಾಗಿ ಕಲೆಯಲು ಸಾಧ್ಯವಿಲ್ಲ ಎಂದು ವೈದ್ಯ ಸೂರ್ಯನಾರಾಯಣ ಹೇಳಿದ್ದಾರೆ.
ಈ ದಿನಗಳಲ್ಲಿ ನೀವು ಯಾವುದೇ ಹಾಡನ್ನು ಯೂಟ್ಯೂಬ್‍ನಲ್ಲಿ ಮತ್ತೆ ಮತ್ತೆ ನೋಡಬಹುದು. ಆದರೆ ನಾನು ಚಿತ್ರಮಂದಿರಗಳಲ್ಲಿ ಮತ್ತೆ ಮತ್ತೆ ಸಿನಿಮಾಗಳನ್ನು ನೋಡಿ ನೃತ್ಯದ ಎಲ್ಲಾ ಹಂತಗಳನ್ನು ಕಲಿತಿದ್ದೇನೆ. ನನ್ನ ಸ್ಟೆಪ್ ಗಳನ್ನು ಸರಿಪಡಿಸಲು ಬಹಳಷ್ಟು ಸಿನಿಮಾಗಳನ್ನು ನೋಡಿದ್ದೇನೆ ಎಂದು ತಿಳಿಸಿದರು.