Saturday, 18th August 2018

Recent News

ವಯಸ್ಸು ನಂಬರ್ ಅಷ್ಟೇ ಎನ್ನುವಂತೆ ಅಂಕಲ್ ಹಾಕಿದ್ರು ಸಖತ್ ಸ್ಟೆಪ್- ವಿಡಿಯೋ ವೈರಲ್

ಮುಂಬೈ: ವ್ಯಕ್ತಿಯೊಬ್ಬ ಹಿಂದಿ ಚಿತ್ರಗೀತೆಗೆ ಸಖತ್ ಹೆಜ್ಜೆ ಹಾಕುವ ಮೂಲಕ ವಯಸ್ಸು ಕೇವಲ ನಂಬರ್ ಮಾತ್ರ ಎನ್ನುವ ಮಾತನ್ನು ಸಾಬೀತು ಪಡೆಸಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬ ವಿವಾಹ ಸಮಾರಂಭದಲ್ಲಿ ಸೃಜನಾತ್ಮ ನೃತ್ಯ ಪ್ರದರ್ಶಿಸಿದ್ದಾರೆ. ಇದನ್ನು ಗೌತಮ್ ತ್ರಿವೇದಿ ಎಂಬವರು “ವಿವಾಹ ಸಮಾರಂಭದ ಅತ್ಯುತ್ತಮ ಪ್ರದರ್ಶನವೆಂದು ಯುನೆಸ್ಕೋ ಆಯ್ಕೆ ಮಾಡಿದೆ” ಅಂತ ಬರೆದು ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ 1.30 ನಿಮಿಷವಿದೆ. ನಟ ಗೋವಿಂದ ಹಾಗೂ ನಟಿ ನಿರ್ಮಲಾ ಅಭಿನಯದ ಬಾಲಿವುಡ್ ಖುದ್ಗರ್ಜ್ ಚಿತ್ರದ ‘ಆಪ್ ಕೆ ಆ ಜಾನೆ ಸೆ’ ಹಾಡಿಗೆ 40ರ ವ್ಯಕ್ತಿ ಸೃಜನಾತ್ಮಕವಾಗಿ ಹೆಜ್ಜೆ ಹಾಕಿದ್ದಾರೆ. ಮುಖದ ಹಾವಭಾವ, ಅಭಿವ್ಯಕ್ತಿ, ದೇಹದ ಚಲನವಲ ನಟ ಗೋವಿಂದು ಅವರನ್ನೇ ಹೋಲುವಂತಿವೆ. ವೇದಿಕೆಯ ತುಂಬಾ ನಡೆದಾಡುತ್ತ ಯುವಕರಂತೆ ನೃತ್ಯ ಮಾಡುವ ಮೂಲಕ ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಮೇ 30ರಂದು ಟ್ವೀಟ್ ಮಾಡಲಾದ ವಿಡಿಯೋವನ್ನು 4 ಸಾವಿರಕ್ಕೂ ಅಧಿಕ ಜನರು ರೀ ಟ್ವೀಟ್ ಮಾಡಿದ್ದು, 9 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಕೇವಲ ಟ್ವಿಟರ್ ಅಲ್ಲದೇ ವಾಟ್ಸಪ್ ನಲ್ಲಿಯೂ ಈ ವಿಡಿಯೋ ಹರಿದಾಡುತ್ತಿದೆ. ಒಟ್ಟಿನಲ್ಲಿ 40ರ ವ್ಯಕ್ತಿ, ಯುವಕರಿಗಿಂತ ತಾನೇನೂ ಕಮ್ಮಿ ಇಲ್ಲ ಎನ್ನುವಂತೆ ಸ್ಟೆಪ್ ಹಾಕುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.

Leave a Reply

Your email address will not be published. Required fields are marked *