ಹೈದರಾಬಾದ್: ಮತ್ತೆ ವಂದೇ ಭಾರತ್ ರೈಲಿನ (Vande Bharat) ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.
ವಿಶಾಖಪಟ್ಟಣಂನಲ್ಲಿ (Visakhapatnam) ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಬೇಕಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಕೋಚ್‌ನ ಎರಡು ಕಿಟಕಿಯ ಗಾಜುಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕಂಚರಪಾಲೆಂ ಬಳಿ ರೈಲು ನಿರ್ವಹಣೆಗಾಗಿ ನಿಂತಿದ್ದಾಗ ಈ ಘಟನೆ ನಡೆದಿದೆ.
Advertisement
Andhra Pradesh| At 6:30 in the evening somebody pelted stones on Vande Bharat train in Visakhapatnam, 2 window panes were totally shattered & need to be replaced. This is very unfortunate: Anup Kumar Satpathy, Divisional Railway Manager pic.twitter.com/gIRyCBB46N
— ANI (@ANI) January 11, 2023
Advertisement
ಬುಧವಾರ ಸಂಜೆ 6:30 ಕ್ಕೆ ವಿಶಾಖಪಟ್ಟಣಂನಲ್ಲಿ ವಂದೇ ಭಾರತ್ ರೈಲಿಗೆ ಯಾರೋ ಕಲ್ಲು ತೂರಾಟ ನಡೆಸಿದರು. ಎರಡು ಕಿಟಕಿ ಗಾಜುಗಳು ಸಂಪೂರ್ಣವಾಗಿ ಒಡೆದುಹೋಗಿದ್ದು ಇದನ್ನು ಬದಲಾಯಿಸಬೇಕಾಗಿದೆ. ಇದು ಅತ್ಯಂತ ದುರದೃಷ್ಟಕರ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನುಪ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಜ.15 ರಿಂದ ಗಾರ್ಡನ್ ಟರ್ಮಿನಲ್ -2 ಸಾರ್ವಜನಿಕರ ಸೇವೆಗೆ ಲಭ್ಯ
Advertisement
Advertisement
ಈ ರೈಲು ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ಚಲಿಸಲಿದೆ. ವಾರಂಗಲ್, ಖಮ್ಮಂ, ವಿಜಯವಾಡ ಮತ್ತು ರಾಜಮಂಡ್ರಿಯಲ್ಲಿ ನಿಲುಗಡೆಯಿದೆ.
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭಿಸಿದ ನಾಲ್ಕೇ ದಿನಕ್ಕೆ ಕಲ್ಲು ತೂರಾಟ ನಡೆದಿತ್ತು. ಜನವರಿ 3 ಮತ್ತು 4 ರಂದು ಹೌರಾ- ಜಲಪೈಗುರಿ ನಡುವೆ ಆರಂಭಗೊಂಡಿದ್ದ ರೈಲಿಗೆ ಕಲ್ಲು ಎಸೆಯಲಾಗಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k