ದುಬೈ: ಶಾರ್ಜಾದಲ್ಲಿ ನಡೆಯಲಿರುವ ಟೆನ್ 10 ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಭಾಗವಹಿಸುತ್ತಿದ್ದು, ಮತ್ತೆ ಅಭಿಮಾನಿಗಳನ್ನು ತಮ್ಮ ಬ್ಯಾಟಿಂಗ್ ಮೂಲಕ ರಂಜಿಸಲಿದ್ದಾರೆ.
ಐಸಿಸಿ ಮಾನ್ಯತೆ ನೀಡಿರುವ ಟೆನ್ 10 ಟೂರ್ನಿ ಮುಂದಿನ ತಿಂಗಳ 23 ರಿಂದ ಆರಂಭವಾಗಲಿದ್ದು, ಸರಣಿಯಲ್ಲಿ ಸೆಹ್ವಾಗ್ ರೊಂದಿಗೆ ಪಾಕ್‍ನ ಅಫ್ರಿದಿ, ನ್ಯೂಜಿಲೆಂಡ್‍ನ ಮೆಕಲಮ್ ಕೂಡ ಭಾಗವಹಿಸುತ್ತಿದ್ದಾರೆ.
The former Indian opener, @virendersehwag is the league icon for the 2️⃣nd season of the #T10League. #T10StandsTall #BusAbDus pic.twitter.com/SUokDkRKS7
— T10 League (@T10League) October 2, 2018
10 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 29 ಪಂದ್ಯಗಳು ನಡೆಯಲಿದ್ದು, ಕೇರಳ ಕಿಂಗ್ಸ್, ಪಂಜಾಬ್ ಲೆಜೆಂಡ್ಸ್, ಮರಾಠಾ ಅರೇಬಿಯನ್ಸ್, ಬೆಂಗಾಲ್ ಟೈಗರ್ಸ್, ದ ಕರಾಚಿಯನ್ಸ್, ರಜಪೂತ್ಸ್, ನಾರ್ಥನ್ ವಾರಿಯರ್ಸ್ ಮತ್ತು ಪಕ್ತೂನ್ ತಂಡಗಳು ಭಾಗವಹಿಸಲಿದೆ.
ಟೆನ್ 10 ಟೂರ್ನಿಯ 2ನೇ ಆವೃತ್ತಿ ಇದಾಗಿದ್ದು, ಮೊದಲ ಆವೃತ್ತಿಯಲ್ಲಿ ದೊರಕಿದ ಯಶಸ್ಸಿನಿಂದ ಕೆಲ ಬದಲಾವಣೆಗಳೊಂದಿಗೆ 2ನೇ ಬಾರಿಗೆ ಸರಣಿ ಆಯೋಜಿಸಿದ್ದಾರೆ. ಈ ಬಾರಿಗೆ ಟೂರ್ನಿಗೆ ಹೊಸದಾಗಿ ಕರಾಚಿಯನ್ಸ್ ಮತ್ತು ನಾರ್ಥನ್ ವಾರಿಯರ್ಸ್ ತಂಡಗಳು ಹೊಸದಾಗಿ ಸೇರ್ಪಡೆಯಾಗಿದೆ. ಡಿಸೆಂಬರ್ 02 ರಂದು ಫೈನಲ್ ಪಂದ್ಯ ನಡೆಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
The first game for the #Legends in the @T10LeagueTweets will be against @BengalTigersUAE on the 23rd of November. Ready to make the loudest roar!#T10League #ChakDePhattay pic.twitter.com/lMv73Ier0u
— Punjabi Legends (@PunjabiLegends_) October 3, 2018