ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ಸೆಹ್ವಾಗ್ ಇಂದು ಬೆಳಗ್ಗೆ ಶಾಲಾ ಪುಸ್ತಕದಲ್ಲಿ ಅವಿಭಕ್ತ ಕುಟುಂಬದ ಬಗ್ಗೆ ತಪ್ಪು ಮಾಹಿತಿಯುಳ್ಳ ಫೋಟೋ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಶಾಲೆಯ ಇಂಗ್ಲಿಷ್ ಪುಸ್ತಕದ ಗುಣಮಟ್ಟದ ಕುರಿತು ಇಂದು ಸೆಹ್ವಾಗ್ ಟ್ವೀಟಿಸಿದ್ದಾರೆ. ಪುಸ್ತಕದಲ್ಲಿಯ ಮುದ್ರಣವಾದ ಕೆಲವು ಸಾಲುಗಳನ್ನು ಮಾರ್ಕ್ ಮಾಡಿ ತಮ್ಮ ಅಭಿಪ್ರಾಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Advertisement
ಅವಿಭಕ್ತ ಕುಟುಂಬ ಅಂದ್ರೆ ತಂದೆ-ತಾಯಿ ಅಲ್ಲದೇ ಆ ಮನೆಯಲ್ಲಿ ಅಜ್ಜ-ಅಜ್ಜಿಯೂ ಇರುತ್ತಾರೆ. ಹಾಗೆ ಕುಟುಂಬದಲ್ಲಿ ಹೆಚ್ಚು ಮಕ್ಕಳು ಸಹ ಇರುತ್ತಾರೆ. ಹಾಗಾಗಿ ಅವಿಭಕ್ತ ಕುಟುಂಬದಲ್ಲಿರುವ ಜನರು ಸಂತೋಷದಿಂದ ಇರೋದಿಲ್ಲ ಎಂಬ ಸಾಲುಗಳು ಪುಸ್ತಕದಲ್ಲಿ ಮುದ್ರಣವಾಗಿದೆ.
Advertisement
ಈ ಸಾಲುಗಳಿಗೆ ಮಾರ್ಕ್ ಮಾಡಿರುವ ಸೆಹ್ವಾಗ್, ಇದೇ ರೀತಿ ಮಕ್ಕಳ ಪುಸ್ತಕಗಳಲ್ಲಿ ಅನಾವಶ್ಯಕ ಮಾಹಿತಿಗಳಿವೆ. ಪುಸ್ತಕ ರಚನಾ ಮಂಡಳಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಬರೆದುಕೊಂಡಿದ್ದಾರೆ.
Advertisement
ಸೆಹ್ವಾಗ್ ಅವರ ಟ್ವೀಟ್‍ಗೆ ಹಲವರು ಬೆಂಬಲ ಸೂಚಿಸಿದ್ದಾರೆ. ಪುಸ್ತಕದಿಂದ ಅನಾವಶ್ಯಕವಾಗಿರುವ ಸಾಲುಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿದ್ದಾರೆ.
Advertisement
A lot of such crap in school textbooks. Clearly the authorities deciding and reviewing content not doing their homework pic.twitter.com/ftaMRupJdx
— Virender Sehwag (@virendersehwag) August 5, 2018