ಮುಂಬೈ: ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಒಂದಿಲ್ಲೊಂದು ಕಾರಣಗಳಿಗೆ ಸದಾ ಸುದ್ದಿಯಲ್ಲಿರುತ್ತಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ತಮ್ಮ ಟೆಸ್ಟ್ ಕ್ರಿಕೆಟ್‌ನ 28ನೇ ಶತಕ ಹಾಗೂ ವೃತ್ತಿ ಜೀವನದ 75ನೇ ಶತಕ ಬಾರಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಮತ್ತೆ `ಸೂರ್ಯʼ ಉದಯಿಸುತ್ತೆ – ಮಿಸ್ಟರ್ 360ಗೆ ಯುವರಾಜ್ ಸಿಂಗ್ ಬೆಂಬಲ
Advertisement
A question for the English exam of 9th Standard.
Showing the picture from the hundred of Virat Kohli against Afghanistan in the Asia Cup. pic.twitter.com/j2bhv6p1pu
— Johns. (@CricCrazyJohns) March 25, 2023
Advertisement
ಇದೀಗ 9ನೇ ತರಗತಿ ಇಂಗ್ಲಿಷ್ ಪರೀಕ್ಷೆಯ ಪ್ರಶ್ನೆಪತ್ರಿಕೆಯೊಂದರಲ್ಲಿ (Exam Question Peper) ವಿರಾಟ್ ಕೊಹ್ಲಿ ಫೋಟೋ ಇರುವುದು ಸುದ್ದಿಯಾಗಿದೆ. ʻಈ ಕೆಳಗಿನ ಚಿತ್ರದ ಬಗ್ಗೆ 100 ರಿಂದ 120 ಪದಗಳಲ್ಲಿ ಉತ್ತರಿಸಿʼ ಎಂಬ ಪ್ರಶ್ನೆ ಕೇಳಿದ್ದು, ಅದರ ಕೆಳಗೆ ಕೊಹ್ಲಿ ಫೋಟೋ ನೋಡಿ ಇದೆ. ಕೊಹ್ಲಿ ಪೋಟೋ ನೋಡುತ್ತಿದ್ದಂತೆ ವಿದ್ಯಾರ್ಥಿಗಳು ಶಾಕ್ ಆಗಿದ್ದಾರೆ. ಇನ್ನೂ ಕೆಲವರು ಸಂತಸದಿಂದಲೇ ಉತ್ತರಿಸಿದ್ದಾರೆ. ಇದನ್ನೂ ಓದಿ: IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?
Advertisement
2022ರ ಐಪಿಎಲ್‌ನಲ್ಲಿ ಕಳಪೆ ಬ್ಯಾಟಿಂಗ್‌ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಕೊಹ್ಲಿ 2022ರ ಏಷ್ಯಾಕಪ್ ಮೂಲಕ ಫಾರ್ಮ್‌ಗೆ ಮರಳಿದರು. ಏಷ್ಯಾಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ 61 ಎಸೆತಗಳಲ್ಲಿ ಬರೋಬ್ಬರಿ 122ರನ್ ಚಚ್ಚಿ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಅದು ಅವರ ವೃತ್ತಿ ಜೀವನದ 71ನೇ ಶತಕವಾಗಿತ್ತು.
Advertisement
ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸುತ್ತಿದ್ದ ಚಿತ್ರವನ್ನೂ ಈ ಪ್ರಶ್ನೆಪತ್ರಿಕೆಯಲ್ಲಿ ನೀಡಲಾಗಿದ್ದು, ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದುವೆರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 28 ಶತಕ, 1 ಟಿ20 ಶತಕ ಹಾಗೂ 46 ಏಕದಿನ ಶತಕಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.