ಸಿಡ್ನಿ: ಬ್ಯಾಂಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಇಲೆವೆನ್ ತಂಡದ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ.
ಪಂದ್ಯದ ಮೂರನೇ ದಿನದಾಟದ ವೇಳೆ 2 ಓವರ್ ಬೌಲ್ ಮಾಡಿದ್ದ ಕೊಹ್ಲಿ, ಅಂತಿಮ ದಿನದಂದು ಮತ್ತೆ ಬೌಲ್ ಹಿಡಿದು ನಿಂತಿದ್ದರು. ಪಂದ್ಯದಲ್ಲಿ ಒಟ್ಟು 7 ಓವರ್ ಎಸೆದ ಕೊಹ್ಲಿ ಅಂತಿಮವಾಗಿ ವಿಕೆಟ್ ಪಡೆಯುವ ಮೂಲಕ ಸಂಭ್ರಮಿಸಿದರು. ಆಸೀಸ್ ತಂಡದ ಪರ ಶತಕ ಸಿಡಿಸಿದ್ದ ವಿಕೆಟ್ ಕೀಪರ್ ಹ್ಯಾರಿ ನೀಲ್ಸನ್ ವಿಕೆಟ್ ಪಡೆದರು. ವಿಕೆಟ್ ಪಡೆಯುತ್ತಿದಂತೆ ಅಚ್ಚರಿ ವ್ಯಕ್ತಪಡಿಸಿದ ಕೊಹ್ಲಿ ಕ್ಷಣ ಸಮಯದ ಬಳಿಕ ಆಟಗಾರರತ್ತ ನೋಡಿ ಸಂಭ್ರಮಿಸಿದರು.
That moment when the Skip gets a wicket #TeamIndia #CAXIvIND pic.twitter.com/VzuAajdM3E
— BCCI (@BCCI) December 1, 2018
ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇದುವರೆಗೂ 8 ವಿಕೆಟ್ ಪಡೆದಿದ್ದು, ವೃತ್ತಿ ಜೀವನದ ಆರಂಭದಲ್ಲಿ ಅರೆ ಕಾಲಿಕ ಸ್ಪಿನ್ನರ್ ಆಗಿ ಬೌಲಿಂಗ್ ಮಾಡುತ್ತಿದ್ದ ಕೊಹ್ಲಿ ಬಳಿಕ ಬ್ಯಾಟಿಂಗ್ ನತ್ತ ಸಂಪೂರ್ಣ ಗಮನ ಹರಿಸಿದ್ದರು. 2016 ರಲ್ಲಿ ಟಿ20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬೌಲ್ ಮಾಡಿದ್ದ ಕೊಹ್ಲಿ, ಜಾನ್ಸನ್ ಚಾರ್ಲ್ಸ್ ವಿಕೆಟ್ ಪಡೆದಿದ್ದರು.
ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 358 ರನ್ ಗಳ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಆಸೀಸ್ ಇಲೆವೆನ್ ತಂಡ 544 ರನ್‍ಗಳ ಬೃಹತ್ ಮೊತ್ತ ಪೇರಿಸಿ ಮೊದಲ ಇನ್ನಿಂಗ್ಸ್ ನಲ್ಲಿ 183 ರನ್‍ಗಳ ಬೃಹತ್ ಮುನ್ನಡೆ ಪಡೆಯಿತು.
https://twitter.com/strangerr_18/status/1068726737461116928
Well look who had a bowl at the SCG today! An amused Ravi Ashwin talks us through his skipper's spell #CAXIvIND pic.twitter.com/Whtx7S9GSq
— cricket.com.au (@cricketcomau) November 30, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv