ಢಾಕಾ: ಬಾಂಗ್ಲಾದೇಶ (BanglaDesh) ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (International Cricket) ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ ಹಾಗೂ ಭಾರತದ 2ನೇ ಆಟಗಾರನಾಗಿದ್ದಾರೆ.
???????????????????????????? ???????????? ???????????????????? ???????????????????? ????????
He brings up his 44th ODI ton off 85 deliveries.
He goes past Ricky Ponting to be second on the list in most number of centuries in international cricket.
Live – https://t.co/HGnEqtZJsM #BANvIND pic.twitter.com/ohSZTEugfD
— BCCI (@BCCI) December 10, 2022
Advertisement
ಬಾಂಗ್ಲಾದೇಶ ವಿರುದ್ಧದ ರಣರೋಚಕ ಪಂದ್ಯದಲ್ಲಿ 91 ಎಸೆತಗಳನ್ನು ಎದುರಿಸಿದ ಕಿಂಗ್ ಕೊಹ್ಲಿ 2 ಸಿಕ್ಸರ್ ಹಾಗೂ 11 ಬೌಂಡರಿಗಳು ಸೇರಿ 113 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡದ ಕೋಚ್ ರಿಕಿ ಪಾಂಟಿಂಗ್ (Ricky Ponting) ಅವರ ದಾಖಲೆಯನ್ನ ಪುಡಿ ಮಾಡಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಕೊಹ್ಲಿ ಕಿಂಗ್ – ನೂತನ ವಿಶ್ವದಾಖಲೆ
Advertisement
Advertisement
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟ್ಸ್‌ಮ್ಯಾನ್‌ಗಳ ಪಟ್ಟಿಯಲ್ಲಿ ಇದೀಗ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ (ODI Cricket) 100 ಶತಕಗಳನ್ನು (ಟೆಸ್ಟ್‌ನಲ್ಲಿ 51, ಏಕದಿನ 49) ಗಳಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ವಿಶ್ವದ ನಂ.1 ಸ್ಥಾನದಲ್ಲಿದ್ದಾರೆ. ಇನ್ನೂ 71 ಶತಕ (ಟೆಸ್ಟ್‌ನಲ್ಲಿ 41, ಏಕದಿನ 30) ಬಾರಿಸಿದ್ದ ರಿಕಿ ಪಾಂಟಿಂಗ್ 2ನೇ ಸ್ಥಾನದಲ್ಲಿದ್ದರು. ಇದೀಗ 72 ಶತಕ (ಟೆಸ್ಟ್ 27, ಏಕದಿನದಲ್ಲಿ 44) ಬಾರಿಸಿ ವಿರಾಟ್ ಕೊಹ್ಲಿ ರಿಕಿ ಪಾಂಟಿಂಗ್ ದಾಖಲೆಯನ್ನ ಸರಿಗಟ್ಟಿದ್ದಾರೆ. ಅಲ್ಲದೇ ಈವರೆಗೆ 1,172 ಬೌಂಡರಿಗಳನ್ನು ಸಿಡಿಸಿ ಅತ್ಯಧಿಕ ಬೌಂಡರಿ ಬಾರಿಸಿದ ವಿಶ್ವದ 5ನೇ ಆಟಗಾರನಾಗಿದ್ದಾರೆ. ಇದನ್ನೂ ಓದಿ: India vs Bangladesh 3rd ODI – ಭಾರತಕ್ಕೆ 227 ರನ್‌ಗಳ ಭರ್ಜರಿ ಜಯ
Advertisement
ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಕ್ರೀಸ್‌ಗಿಳಿದ ಟೀಂ ಇಂಡಿಯಾ (Team India) 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾ ತಂಡ 34 ಓವರ್‌ಗಳಲ್ಲಿ 182 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ 227 ರನ್‌ಗಳ ಬೃಹತ್ ಮೊತ್ತದ ಅಂತರದಲ್ಲಿ ಜಯ ಸಾಧಿಸಿತು.