ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪೂಮಾದ ರಾಯಭಾರಿಯಾಗಿ ನೇಮಕವಾಗಿದ್ದು, ಬರೋಬ್ಬರಿ 110 ಕೋಟಿ ರೂಪಾಯಿಯ 8 ವರ್ಷಗಳ ಡೀಲ್‍ಗೆ ಸಹಿ ಹಾಕಿದ್ದಾರೆ.
ಈ ಮೂಲಕ ಕೊಹ್ಲಿ 100 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಬ್ರ್ಯಾಂಡ್‍ವೊಂದರ ಜಾಹಿರಾತು ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
Advertisement
ಪೂಮಾದಲ್ಲಿರುವ ಶ್ರೇಷ್ಠ ಅಥ್ಲೀಟ್‍ಗಳ ಪಟ್ಟಿಯ ಭಾಗವಾಗಿರುವುದು ನನ್ನ ಸೌಭಾಗ್ಯ. ಈಗಿನ ಉಸೇನ್ ಬೋಲ್ಟ್ ಮಾತ್ರವಲ್ಲದೆ ಪೀಲೆ, ಮರಡೋನಾ, ಥೈರಿ ಹೆನ್ರಿ ಮುಂತಾದವರೊಂದಿಗೆ ಈ ಬ್ರಾಂಡಿನ ಇತಿಹಾಸವಿದೆ. ನಾನು ಮತ್ತು ಪೂಮಾ ದೀರ್ಘಾವಧಿ ಸಹಭಾಗಿತ್ವಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ. ಭಾರತೀಯ ಮಾರುಕಟ್ಟೆಯಲ್ಲಿ ಪೂಮಾ ಕಡಿಮೆ ಅವಧಿಯಲ್ಲಿ ಇಷ್ಟು ಜನಪ್ರಿಯತೆ ಗಳಿಸಿರೋದು ಮೆಚ್ಚುವಂತದ್ದು ಅಂತ ಕೊಹ್ಲಿ ಹೇಳಿದ್ದಾರೆ.
Advertisement
ಕೊಹ್ಲಿ ಈ ಹಿಂದೆ ಪೂಮಾದ ಪ್ರತಿಸ್ಪರ್ಧಿ ಬ್ರಾಂಡ್ ಆದ ಅಡಿದಾಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಕಳೆದ ವರ್ಷ ಅಡಿದಾಸ್‍ನೊಂದಿಗಿನ ಒಪ್ಪಂದದ ಅವಧಿ ಮುಗಿದಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಕ್ರೀಡಾ ಬ್ರ್ಯಾಂಡ್‍ವೊಂದಕ್ಕೆ ಕೊಹ್ಲಿ ಜಾಹಿರಾತು ನೀಡುತ್ತಿದ್ದು, ಮುಂದಿನ 8 ವರ್ಷಗಳ ಕಾಲ ಪೂಮಾದ ಗ್ಲೋಬಲ್ ಬ್ರಾಂಡ್ ಅಂಬಾಸಿಡರ್ ಆಗಿg
Advertisement
2016ರ ಸೆಲಬ್ರಿಟಿ ಬ್ರಾಂಡ್ ವರದಿಯ ಪ್ರಕಾರ ಕೊಹ್ಲಿ 9.2 ಕೋಟಿ ಬ್ರಾಂಡ್ ಮೌಲ್ಯ ಹೊಂದಿದ್ದು, ಮೊದಲ ಸ್ಥಾನದಲ್ಲಿರುವ ಶಾರುಖ್ 13ಕೋಟಿ ಬ್ರಾಂಡ್ ಮೌಲ್ಯ ಹೊಂದಿದ್ದಾರೆ.
Advertisement
ಕೊಹ್ಲಿ ಬಳಿಯಿರುವ ಬ್ರಾಂಡ್‍ಗಳು: ಪೆಪ್ಸಿ, ಆಡಿ, ಹರ್ಬಲ್ ಲೈಫ್, ಕೋಲ್ಗೇಟ್, ವಿಕ್ಸ್, ಬೂಸ್ಟ್, ಟಿಸ್ಸೂಟ್,ಯುಎಸ್‍ಎಲ್, ಟಿವಿಎಸ್, ಸ್ಮಾಷ್, ನಿತೇಶ್ ಎಸ್ಟೇಟ್ಸ್.