ಮುಂಬೈ: ಟೀಂ ಇಂಡಿಯಾದ ಟೆಸ್ಟ್ ನಾಯಕರಾಗಿದ್ದ ವಿರಾಟ್ ಕೊಹ್ಲಿ ಇದೀಗ ಟೆಸ್ಟ್ ನಾಯಕತ್ವವನ್ನು ತೊರೆದಿದ್ದಾರೆ.
Advertisement
ಈ ಹಿಂದೆ ಟೀಂ ಇಂಡಿಯಾದ ಟಿ20 ಮತ್ತು ಏಕದಿನ ತಂಡದ ನಾಯಕತ್ವವವನ್ನು ತೊರೆದಿದ್ದ ಕೊಹ್ಲಿ ಇದೀಗ ದಕ್ಷಿಣ ಆಫ್ರಿಕಾ ಸರಣಿ ಸೋಲಿನ ಬಳಿಕ ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಎಲ್ಲಾ ಮಾದರಿಯ ತಂಡದ ನಾಯಕತ್ವದಿಂದ ಕಿಂಗ್ ಕೊಹ್ಲಿ ಕೆಳಗಿಳಿದು ಆಟಗಾರನಾಗಿ ಮಾತ್ರ ತಂಡದೊಂದಿಗಿರಲು ಬಯಸಿದ್ದಾರೆ. ಇದನ್ನೂ ಓದಿ: ಟೆಸ್ಟ್ ಸರಣಿ ಸೋಲಿಗೆ ಕಾರಣವಾಯಿತೇ ಪೂಜಾರ, ರಹಾನೆ ಬ್ಯಾಟಿಂಗ್ ವೈಫಲ್ಯ?
Advertisement
Advertisement
ಟೆಸ್ಟ್ ನಾಯಕತ್ವವನ್ನು ತೊರೆಯುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ ಕೊಹ್ಲಿ, ನಾನು 7 ವರ್ಷಗಳಿಂದ ಟೀಂ ಇಂಡಿಯಾದ ಯಶಸ್ಸಿಗಾಗಿ ಶ್ರಮಿಸುತ್ತಿದ್ದೇನೆ. ಜೊತೆಗೆ ಈ ಜರ್ನಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಇದೀಗ ನನ್ನ ತಂಡಕ್ಕಾಗಿ ಯೋಚನೆ ಮಾಡಿ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸುತ್ತಿದ್ದೇನೆ. ಇದನ್ನೂ ಓದಿ: ಶಾಕಿಂಗ್ ಡಿಆರ್‌ಎಸ್ ವಿಡಿಯೋಗೆ ಕೊಹ್ಲಿ ಕಿಡಿ – ರಿವ್ಯೂ ಸಕ್ಸಸ್ ಎಂದು ವಾಹಿನಿಯಿಂದ ಸಮರ್ಥನೆ
Advertisement
???????? pic.twitter.com/huBL6zZ7fZ
— Virat Kohli (@imVkohli) January 15, 2022
ನನಗೆ ಟೀಂ ಇಂಡಿಯಾವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟ ಬಿಸಿಸಿಐಗೆ ಧನ್ಯವಾದ ಸಲ್ಲಿಸುತ್ತೇನೆ. ನಾನು ನಾಯಕನಾಗಿದ್ದಾಗ ಎಲ್ಲಾ ಆಟಗಾರರು ಕೂಡ ನನಗೆ ಸಹಕರಿಸಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು. ಹಾಗೆ ನನ್ನ ಯಶಸ್ಸಿಗೆ ಸಹಕರಿಸಿದ ಮಾಜಿ ಕೋಚ್ ರವಿಶಾಸ್ತ್ರಿ ಹಾಗೂ ಮೊಟ್ಟ ಮೊದಲ ಬಾರಿಗೆ ನನ್ನನ್ನು ನಾಯಕನಾಗಿ ಬೆಳೆಸಿದ ಮಹೇಂದ್ರ ಸಿಂಗ್ ಧೋನಿಗೆ ಚಿರಋಣಿ ಎಂದು ಬರೆದುಕೊಂಡಿದ್ದಾರೆ.