ನನ್ನ ಹೃದಯ, ಆತ್ಮ ಬೆಂಗಳೂರಿಗಾಗಿ… ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡ್ತೀನಿ – ಕೊಹ್ಲಿ ಭಾವುಕ

Public TV
2 Min Read
Virat Kohli 02

ಅಹಮದಾಬಾದ್‌: ನನ್ನ ಹೃದಯ ಬೆಂಗಳೂರಿಗಾಗಿ… ನನ್ನ ಆತ್ಮ ಬೆಂಗಳೂರಿಗಾಗಿ… ನಾನು ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ…. ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ಅಭಿಮಾನಿಗಳ (RCB Fans) ಕೋಟೆ ಕಟ್ಟಿದ ಸಾಮ್ರಾಟ ವಿರಾಟ್‌ ಕೊಹ್ಲಿ (Virat Kohli) ಅವರು ಹೇಳಿದ ಮಾತುಗಳಿವು.

ಚುಟುಕು ಸಂದರ್ಶನದಲ್ಲಿ ಮಾತನಾಡುತ್ತಾ… ನಾನು ಈ ರಾತ್ರಿ ಮಗುವಿನಂತೆ ಮಲಗುತ್ತೇನೆ ಎಂದು ಹೇಳಿದ್ದರಲಲ್ದೇ… ನನ್ನ ಹೃದಯ, ಆತ್ಮ ಎರಡೂ ಬೆಂಗಳೂರಿಗಾಗಿಯೇ.. ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ ಎಂದು ಭಾವುಕವಾಗಿ ನುಡಿದರು.

Virat Kohli 1

ಮುಂದುವರೆದು… ನಾನು ಪ್ರಭಾವಿ ಆಟಗಾರನಾಗಿ ಆಡಲು ಬಯಸುವುದಿಲ್ಲ, ನಾನು ಫೀಲ್ಡಿಂಗ್ ಮಾಡಿ ಪ್ರಭಾವ ಬೀರಲು ಬಯಸುತ್ತೇನೆ ಎಂದರಲ್ಲದೇ, ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವೋ ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. 18 ವರ್ಷಗಳು ಕಳೆದಿವೆ. ಈ ಬಾರಿ ನಾನು ನನ್ನ ಯೌವನವನ್ನು ಮರೆತು ನನ್ನ ಅತ್ಯುನ್ನತೆಯ ಆಟವನ್ನು ನೀಡಿದ್ದೇನೆ. ನನ್ನಲ್ಲಿರುವ ಎಲ್ಲವನ್ನೂ ನಾನು ಅದಕ್ಕೆ ನೀಡಿದ್ದೇನೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ಭಾವುಕನಾಗಿದ್ದೆ. ಈ ಫ್ರಾಂಚೈಸಿಗಾಗಿ ಅವರು (ಎಬಿ ಡಿವಿಲಿಯರ್ಸ್) ತುಂಬಾ ಮಾಡಿದ್ದಾರೆ.

RCB Win 05

ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ
ಬಳಿಕ ಕಪ್‌ ಗೆದ್ದ ಸಂಭ್ರಮದಲ್ಲೂ ಬೆಂಗಳೂರನ್ನು ಮರೆಯದ ಕೊಹ್ಲಿ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು. ಯಾರೋ ಒಬ್ಬರು ಬೆಂಗಳೂರಿನ ಒಂದು ವಿಡಿಯೋ ಕಳಿಸಿದ್ರು, ಇಡೀ ನಗರ ಪಟಾಕಿ ಸಿಡಿಸಿ ಸಂಭ್ರಮಿಸುತ್ತು. ಆ ಅನುಭವವೇ ಬೇರೆ ಅದನ್ನು ಹೇಳಲು ಆಗುವುದಿಲ್ಲ, ಅನುಭವಿಸಬೇಕು ಅಂತ ಹೇಳಿದ್ರು. ಈ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಾಚಣೆ ನಡೆಸುವ ಸುಳಿವುಕೊಟ್ಟರು.

RCB Team

ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಮೊದಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.

Share This Article