ಲಂಡನ್: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಗೌರವ ನೀಡಲಾಗಿದ್ದು, ಲಂಡನ್‍ನ ಲಾಡ್ರ್ಸ್ ಕ್ರೀಡಾಂಗಣದಲ್ಲಿ ಕೊಹ್ಲಿ ಅವರ ಮೆಣದ ಪ್ರತಿಮೆಯನ್ನ ಆನಾವರಣ ಮಾಡಲಾಗಿದೆ.
ವಿಶ್ವಕಪ್ ಟೂರ್ನಿಗೆ ಅದ್ದೂರಿ ಆರಂಭ ನೀಡಿದ ಸಮಾರಂಭದ ವೇಳೆ ಕೊಹ್ಲಿ ಅವರ ಪ್ರತಿಮೆ ಅನಾವರಣಗೊಳಿಸಲಾಗಿದ್ದು, ಮೇ 30 ರಿಂದ ಜೂನ್ 15ರ ವರೆಗೂ ಅಂದರೆ ಟೂರ್ನಿ ಮುಕ್ತಾಯವಾಗುವವರೆಗೂ ಲಂಡನ್‍ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
Advertisement
Everyone was a little shocked to see @imVkohli at Lord’s Cricket Ground yesterday ???? Catch him at Madame Tussauds London while the #CricketWorldCup2019 is on! @HomeOfCricket pic.twitter.com/pTAxK5xogb
— Madame Tussauds (@MadameTussauds) May 30, 2019
Advertisement
ಕೊಹ್ಲಿ ಮೆಣದ ಪ್ರತಿಮೆಯನ್ನ ವಿಶ್ವಕಪ್ ಟೂರ್ನಿಯ ಹೊಸ ವಿನ್ಯಾಸ ಟೀಂ ಇಂಡಿಯಾ ಜೆರ್ಸಿಯೊಂದಿಗೆ ನಿರ್ಮಿಸಿಲಾಗಿದೆ. ಅಲ್ಲದೇ ವಿರಾಟ್ ಕೊಹ್ಲಿ ಅವರೇ ನೀಡಿದ್ದ ಶೂ, ಗ್ಲೌಸ್ ಗಳನ್ನು ಪ್ರತಿಮೆಗೆ ಅಳವಡಿಸಲಾಗಿದೆ. ವಿಶ್ವದ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬ್ರಿಟಿಷ್ ಓಟಗಾರ ಫರಾಹ್ ರಂತಹ ದಿಗ್ಗಜರೊಂದಿಗೆ ಕೊಹ್ಲಿ ಪ್ರತಿಮೆಯನ್ನು ಪ್ರದರ್ಶನಕ್ಕೆ ಇಡಲಾಗಿದೆ.
Advertisement
ವಿಶ್ವ ಕ್ರಿಕೆಟ್ ನಲ್ಲಿ ನಂ.1 ಬ್ಯಾಟ್ಸ್ ಮನ್ ಸ್ಥಾನ ಪಡೆದಿರುವ ಕೊಹ್ಲಿ, 77 ಟೆಸ್ಟ್ ಪಂದ್ಯಗಳನ್ನು ಆಡಿದ್ದು 6613 ರನ್ ಸಿಡಿಸಿದ್ದಾರೆ. ಇದರಲ್ಲಿ 25 ಶತಕ, 20 ಅರ್ಧ ಶತಕಗಳು ಸೇರಿದೆ. ಏಕದಿನ ಮಾದರಿಯಲ್ಲಿ 227 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ, 41 ಶತಕ, 49 ಅರ್ಧ ಶತಕಗಳೊಂದಿಗೆ 10,843 ರನ್ ಗಳಿಸಿದ್ದಾರೆ.
Advertisement
ವಿರಾಟ್ ಕೊಹ್ಲಿ ಭಾಗವಹಿಸುತ್ತಿರುವ ಮೂರನೇ ವಿಶ್ವಕಪ್ ಟೂರ್ನಿ ಇದಾಗಿದ್ದು, ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ವಿಶ್ವಕಪ್ ಪ್ರಯಾಣ ಆರಂಭಿಸುವ ಮುನ್ನ ಭಾರತದಲ್ಲಿ ಮಾತನಾಡಿದ್ದ ಕೊಹ್ಲಿ, ಈ ಬಾರಿಯ ಟೂರ್ನಿ ನನಗೆ ತುಂಬ ಸವಾಲಿನ ವಿಶ್ವಕಪ್. ನಾವು ಉತ್ತಮ ಕ್ರಿಕೆಟ್ ಅಟದ ಕಡೆ ಗಮನ ನೀಡಬೇಕು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆಟವಾಡಿದರೆ ನಾವು ಆಡಿದ ಪ್ರತಿ ಪಂದ್ಯದಲ್ಲೂ ಉತ್ತಮ ಫಲಿತಾಂಶ ಕಾಣಬಹುದು. ನಮ್ಮ ತಂಡ ಸಾಧ್ಯವದಷ್ಟು ಸರಳವಾಗಿ ಇರಲು ಪ್ರಯತ್ನಮಾಡಬೇಕು ಎಂದಿದ್ದರು.
Captains including @Eoin16 and @imVkohli met Her Majesty and His Royal Highness before joining a Garden Party at Buckingham Palace. pic.twitter.com/AjS5eZBrVH
— The Royal Family (@RoyalFamily) May 29, 2019