ಮುಂಬೈ: ವಿಶ್ವ ಕ್ರಿಕೆಟ್ ಪ್ರಪಂಚದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಚ್ಚು ಖ್ಯಾತಿಯನ್ನು ಪಡೆದಿದ್ದಾರೆ. ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಬ್ರೇಕ್ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ಏಕೈಕ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಏಕದಿನ, ಟಿ20, ಟೆಸ್ಟ್ ಪಂದ್ಯಗಳಲ್ಲಿ ತಮ್ಮದೇ ಮಾರ್ಕ್ ಸೃಷ್ಟಿಸಿದ್ದಾರೆ. ಆದರೆ ವೃತ್ತಿ ಜೀವನದ ಆರಂಭದಲ್ಲಿ ಆಯ್ಕೆ ಸಮಿತಿ ತಮ್ಮನ್ನು ಆಯ್ಕೆ ಮಾಡಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾಗಿ ಸ್ವತಃ ಕೊಹ್ಲಿ ರಿವೀಲ್ ಮಾಡಿದ್ದಾರೆ.
Advertisement
ದೆಹಲಿ ಪರ ದೇಶೀಯ ಕ್ರಿಕೆಟ್ ಆಡಿದ್ದ ಕೊಹ್ಲಿ, ಆ ಬಳಿಕ ಅಂಡರ್-19 ವಿಶ್ವಕಪ್ ಟೂರ್ನಿಯಿಂದ ಬೆಳಕಿಗೆ ಬಂದಿದ್ದರು. ಆದರೆ ವೃತ್ತಿ ಜೀವನದ ಆರಂಭದಲ್ಲಿ ಮೊದಲ ಬಾರಿಗೆ ರಾಜ್ಯ ತಂಡಕ್ಕೆ ಆಯ್ಕೆ ಆಗುವ ನಿರೀಕ್ಷೆ ಹೊಂದಿದ್ದ ವೇಳೆ ಕೊಹ್ಲಿ ನಿರಾಸೆ ಅನುಭವಿಸಿದ್ದರು.
Advertisement
ರಾಜ್ಯ ತಂಡಕ್ಕೆ ಆಯ್ಕೆ ಮಾಡುವ ಟ್ರಯಲ್ಸ್ ವೇಳೆ ಆಯ್ಕೆದಾರರು ನನ್ನನ್ನು ರಿಜೆಕ್ಟ್ ಮಾಡಿದ್ದರು. ಪರಿಣಾಮ ಅಂದು ರಾತ್ರಿ ಮನೆಯಲ್ಲಿ ಕಣ್ಣೀರಿಟಿದ್ದೆ. ಏಕೆಂದರೆ ಅಲ್ಲಿವರೆಗೂ ನಾನು ಉತ್ತಮ ಸ್ಕೋರ್ ಗಳಿಸಿ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಹೊಂದಿದೆ. ಆದರೂ ಅನಿರೀಕ್ಷಿತವಾಗಿ ನನ್ನನ್ನು ರಿಜೆಕ್ಟ್ ಮಾಡಲಾಗಿತ್ತು. ಅಂದು ಕೋಚ್ ಬಳಿ ಸುಮಾರು 2 ಗಂಟೆ ಚರ್ಚೆ ನಡೆಸಿ ಮನೆಗೆ ತೆರಳಿದ್ದೆ. ಆದರೆ ಆ ಘಟನೆ ನನ್ನ ಆಟದ ಮೇಲೆ ಯಾವುದೇ ಪ್ರಭಾವ ಉಂಟುಮಾಡಲಿಲ್ಲ. ಕ್ರಿಕೆಟ್ ಮೇಲಿನ ನನ್ನ ಆಸಕ್ತಿ ಇಂದು ಈ ಸ್ಥಾನದಲ್ಲಿ ತಂದು ನಿಲ್ಲಿಸಿದೆ ಎಂದು ಕೊಹ್ಲಿ ಹೇಳಿದ್ದಾರೆ.
Advertisement
Advertisement
2006ರಲ್ಲಿ ದೆಹಲಿ ತಂಡಕ್ಕೆ ಆಯ್ಕೆಯಾಗಿದ್ದ ಕೊಹ್ಲಿ, 2008ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. 2014ರಲ್ಲಿ ಮೊದಲ ಬಾರಿಗೆ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು. 2017ರ ಬಳಿಕ ಪೂರ್ಣ ಪ್ರಮಾಣದಲ್ಲಿ ತಂಡದ ನಾಯಕರಾದರು. 2018-19ರ ಅವಧಿಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ತಂಡದ ಟೆಸ್ಟ್ ಟೂರ್ನಿ ಗೆದ್ದು ದಾಖಲೆ ಬರೆದಿತ್ತು.