World Cup 2023: 6 ವರ್ಷಗಳ ಬಳಿಕ ಬೌಲಿಂಗ್‌ ಮಾಡಿ ಅಭಿಮಾನಿಗಳ ಮನಗೆದ್ದ ಕಿಂಗ್‌ ಕೊಹ್ಲಿ!

Public TV
3 Min Read
Kohli 2

ಮುಂಬೈ: ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಸ್ಟಾರ್‌ ಬ್ಯಾಟರ್‌ ವಿರಾಟ್​ ಕೊಹ್ಲಿ (Virat Kohli) ಅವರು ಬರೋಬ್ಬರಿ 6 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​​ನಲ್ಲಿ ಬೌಲಿಂಗ್​ ಮಾಡಿ ಗಮನಸೆಳೆದಿದ್ದಾರೆ. ಹಾರ್ದಿಕ್ ಪಾಂಡ್ಯ ಗಾಯಗೊಂಡ ಕಾರಣದಿಂದ ಕೊಹ್ಲಿಗೆ ಈ ಅವಕಾಶ ಒಲಿದು ಬಂದಿತು.

ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ (ODI World Cup) ಪಂದ್ಯದಲ್ಲಿ ಟೀಂ ಇಂಡಿಯಾ ಆಲ್​ರೌಂಡರ್​​ ಹಾರ್ದಿಕ್ ಪಾಂಡ್ಯ (Hardik Pandya) ಗಾಯಗೊಂಡಿದ್ದರು. ಇದರಿಂದ ಬಾಕಿ 3 ಎಸೆತಗಳನ್ನು ಕೊಹ್ಲಿ ಬೌಲಿಂಗ್‌ ಮಾಡುವ ಮೂಲಕ ಗಮನ ಸೆಳೆದರು. ಆ ಮೂಲಕ 6 ವರ್ಷಗಳ ನಂತರ ಚೆಂಡು ಹಿಡಿದು ವಿಕೆಟ್​ ಪಡೆಯಲು ಪ್ರಯತ್ನಿಸಿದರು. ಇದನ್ನೂ ಓದಿ: World Cup 2023: ಟೀಂ ಇಂಡಿಯಾ ಬೌಲಿಂಗ್‌ ದಾಳಿಗೆ ಬೆಚ್ಚಿದ ಬಾಂಗ್ಲಾ – ಭಾರತಕ್ಕೆ 257 ರನ್‌ಗಳ ಗುರಿ

Kohli 4

ಐಸಿಸಿ ಏಕದಿನ ವಿಶ್ವಕಪ್ (Icc ODI World Cup) ಟೂರ್ನಿಯ 17ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸುತ್ತಿವೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 9ನೇ ಓವರ್​​ನಲ್ಲಿ ಬೌಲಿಂಗ್‌ ಮಾಡುತ್ತಿದ್ದ ಪಾಂಡ್ಯ 3ನೇ ಎಸೆತ ಬೌಲಿಂಗ್‌ ಮಾಡಿದಾಗ ಕ್ರೀಸ್‌ನಲ್ಲಿದ್ದ ಲಿಟ್ಟನ್‌ ದಾಸ್‌ ಸ್ಟ್ರೈಟ್‌ಡ್ರೈವ್‌ ಮಾಡಿದರು. ಆಗ ಕಾಲಿನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದಾಗ ಪಾಂಡ್ಯ ಬ್ಯಾಲೆನ್ಸ್‌ ತಪ್ಪಿ ಕಾಲು ಉಳುಕಿಸಿಕೊಂಡರು. ತಕ್ಷಣವೇ ಫಿಸಿಯೋ ಥೆರಪಿಸ್ಟ್‌ ಬಂದು ಚಿಕಿತ್ಸೆ ನೀಡಿದರೂ ಮತ್ತೆ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಮೈದಾನ ತೊರೆಯಲು ನಿರ್ಧರಿಸಿದರು. ಹಾಗಾಗಿ ಉಳಿದಿದ್ದ ಮೂರು ಎಸೆತಗಳನ್ನು ಕೊಹ್ಲಿ ಎಸೆಯುವ ಮೂಲಕ ಬೌಲಿಂಗ್​ ಅನ್ನು ಪೂರ್ಣಗೊಳಿಸಿದರು. ಕೊಹ್ಲಿ 3 ಎಸೆತಗಳಲ್ಲಿ 2 ರನ್‌ ಬಿಟ್ಟುಕೊಟ್ಟರು.

Kohli 3

ವಿಶ್ವಕಪ್​ನಲ್ಲಿ 8 ವರ್ಷಗಳ ನಂತರ ಬೌಲಿಂಗ್: 2017ರಲ್ಲಿ ಶ್ರೀಲಂಕಾ (Sri Lanka) ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಕೊಹ್ಲಿ ಬೌಲಿಂಗ್ ಮಾಡಿ 2 ಓವರ್‌ಗಳಲ್ಲಿ ಕೇವಲ 12 ರನ್‌ ಬಿಟ್ಟುಕೊಟ್ಟಿದ್ದರು. ಇನ್ನು ಏಕದಿನ ವಿಶ್ವಕಪ್​​ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಇವತ್ತು ಸೇರಿ 4ನೇ ಬಾರಿಗೆ ಬೌಲಿಂಗ್ ಮಾಡಿದಂತಾಗಿದೆ. 2011ರ ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಹ್ಮದಾಬಾದ್​ನಲ್ಲಿ ನಡೆದ ಕ್ವಾರ್ಟರ್​ಫೈನಲ್​​ನಲ್ಲಿ 1 ಓವರ್​​ ಬೌಲಿಂಗ್​ ಮಾಡಿ 6 ರನ್ ನೀಡಿದ್ದರು. ಅದೇ ವಿಶ್ವಕಪ್​ನ ಫೈನಲ್​​ನಲ್ಲಿ ಶ್ರೀಲಂಕಾ ವಿರುದ್ಧ 1 ಓವರ್​​ ಬೌಲಿಂಗ್ ಮಾಡಿದ್ದ ಕೊಹ್ಲಿ 6 ರನ್ ಬಿಟ್ಟುಕೊಟ್ಟಿದ್ದರು. ಆ ಬಳಿಕ 2015ರ ವಿಶ್ವಕಪ್​ನಲ್ಲಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್​ನಲ್ಲಿ 1 ಓವರ್​​ ಬೌಲಿಂಗ್ ಮಾಡಿದ್ದ ಕೊಹ್ಲಿ 7 ರನ್ ಕೊಟ್ಟಿದ್ದರು. ಇದೀಗ ಮತ್ತೊಮ್ಮೆ ವಿಶ್ವಕಪ್​ನಲ್ಲಿ ಬೌಲಿಂಗ್ ಎಸೆದಿದ್ದು, 3 ಎಸೆತಗಳಲ್ಲಿ 2 ರನ್ ನೀಡಿದ್ದಾರೆ.

ಐಪಿಎಲ್‌ನಲ್ಲಿ ರನ್‌ ಚಚ್ಚಿಸಿಕೊಂಡಿದ್ದ ಕೊಹ್ಲಿ: ಏಕದಿನ ಪಂದ್ಯ ಮಾತ್ರವಲ್ಲದೇ ಐಪಿಎಲ್‌ನಲ್ಲೂ ಕೊಹ್ಲಿ ಬೌಲಿಂಗ್‌ ಮಾಡಿ ಗಮನ ಸೆಳೆದಿದ್ದಾರೆ. 2012ರ ಐಪಿಎಲ್‌ ಟೂರ್ನಿಯ 13ನೇ ಪಂದ್ಯದಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಕೊಹ್ಲಿ, ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 2 ಓವರ್‌ ಬೌಲಿಂಗ್‌ ಮಾಡಿ 36 ರನ್‌ ಚಚ್ಚಿಸಿಕೊಂಡಿದ್ದರು. ಇದು ತಂಡದ ಸೋಲಿಗೂ ಕಾರಣವಾಗಿತ್ತು. ಇದನ್ನೂ ಓದಿ: ಗೋ ಬ್ಯಾಕ್ ರಿಜ್ವಾನ್ – ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆಯ ಬಿಸಿ

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿ, ಭಾರತಕ್ಕೆ 257 ರನ್‌ಗಳ ಗುರಿ ನೀಡಿದೆ. ಇದನ್ನೂ ಓದಿ: ಅಫ್ಘಾನ್ ವಿರುದ್ಧ ನ್ಯೂಜಿಲೆಂಡ್‌ಗೆ 149 ರನ್‌ಗಳ ಜಯ – ನಂಬರ್ 1 ಸ್ಥಾನಕ್ಕೆ ಜಿಗಿತ

Web Stories

Share This Article