ಕೊಹ್ಲಿಯ ಪೇಂಟಿಂಗ್ ಚಿತ್ರಿಸಿ ಉಡುಗೊರೆ ನೀಡಿದ ಕಲಾವಿದೆ

Public TV
1 Min Read
Virat Kohli 5

ಕೊಲಂಬೋ: ಟೀಂ ಇಂಡಿಯಾ (Team India) ಆಟಗಾರ ಕೊಹ್ಲಿಗೆ (Virat Kohli) ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ (Asia Cup) ಪಂದ್ಯದ ವೇಳೆ ಚಿತ್ರ ಕಲಾವಿದೆಯೊಬ್ಬರು ಕೈಯಿಂದ ಬಿಡಿಸಿದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

ಕೊಹ್ಲಿ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿರುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಆಗಾಗ ಈ ರೀತಿಯ ಉಡುಗೊರೆಗಳು ಒಲಿದು ಬರುತ್ತವೆ. ಈಗ ಈ ಭಾವಚಿತ್ರವನ್ನು ಪಡೆದು ಸಂಭ್ರಮಿಸಿದ ಕ್ಷಣ ವೀಡಿಯೋದಲ್ಲಿ ಸೆರೆಯಾಗಿದೆ. ಅದರಲ್ಲಿ ಯುವತಿಗೆ ಕೊಹ್ಲಿ ಧನ್ಯವಾದ ತಿಳಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: Asia Cup – ಇಂದಿನ ಪಂದ್ಯ ರದ್ದಾದ್ರೆ ಫೈನಲಿಗೆ ಹೋಗುವವರು ಯಾರು?

ಈ ವಾರದ ಆರಂಭದಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಕೊಹ್ಲಿ 47ನೇ (ಏಕದಿನ ಪಂದ್ಯದಲ್ಲಿ) ಶತಕವನ್ನು ದಾಖಲಿಸಿದ್ದರು. ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು ನಾನು ತಂಡಕ್ಕೆ ಸಹಾಯ ಮಾಡುವ ರೀತಿಯಲ್ಲಿ ಆಡಲು ಸದಾ ತಯಾರಾಗಿರುತ್ತೇನೆ ಎಂದಿದ್ದರು.

ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಆಡಲಿದೆ. ಅಲ್ಲದೇ ಭಾನುವಾರ ಶ್ರೀಲಂಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಸೆಣೆಸಲಿದೆ. ಇದನ್ನೂ ಓದಿ: Asia Cup 2023: ಮಳೆ ಬಿಡುವು – ನಿರ್ಣಾಯಕ ಪಂದ್ಯದಲ್ಲಿ ಲಂಕಾ-ಪಾಕ್‌ಗೆ ಶಾಕ್‌

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article