ಕೊಲಂಬೊ: 2023ರ ಏಕದಿನ ಏಷ್ಯಾಕಪ್ (Asia Cup 2023) ಟೂರ್ನಿ ನಿರ್ಣಾಯಕ ಹಂತಕ್ಕೆ ತಲುಪಿದೆ. ಇಂದಿನ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪಂದ್ಯಕ್ಕೆ ಮಳೆ ಬಿಡುವು ನೀಡಿದ್ದು ತಡವಾಗಿದ್ದರಿಂದ ಓವರ್ ಕಡಿತಗೊಳಿಸಲಾಗಿದೆ.
Focused on the method ????
???? ©️ @babarazam258 in the nets ????#PAKvSL | #AsiaCup2023 pic.twitter.com/ocLuVoOpON
— Pakistan Cricket (@TheRealPCB) September 14, 2023
Advertisement
ಮಳೆಯಿಂದ (Rain) ಮೈದಾನವನ್ನು ಒಣಗಿಸುವ ಕಾರ್ಯಾಚರಣೆ ಮುಕ್ತಾಯಗೊಂಡ ನಂತರ ಪಂದ್ಯವನ್ನು 45 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಇತ್ತಂಡಗಳಿಗೂ ತಲಾ 45 ಓವರ್ ನಿಗದಿಪಡಿಸಲಾಗಿದ್ದು, 9 ಓವರ್‌ಗೆ ಪವರ್ ಪ್ಲೇ ಮುಕ್ತಾಯವಾಗಲಿದೆ. ಮಳೆಯ ಕಾಟ ಮುಂದುವರಿದರೆ, ಮತ್ತಷ್ಟು ಓವರ್ ಕಡಿತಗೊಳಿಸುವ ಬಗ್ಗೆ ಮಾತುಕತೆ ನಡೆಯುತ್ತದೆ. ಒಂದು ವೇಳೆ ಪಂದ್ಯ ರದ್ದಾದರೆ ರನ್‌ರೇಟ್ ಮೇಲೆ ಫೈನಲ್‌ಗೆ ತಂಡವನ್ನ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
Advertisement
Advertisement
ಸದ್ಯ ಪಾಕಿಸ್ತಾನ (Pakistan) ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಭಾರತದ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: Asia Cup – ಇಂದಿನ ಪಂದ್ಯ ರದ್ದಾದ್ರೆ ಫೈನಲಿಗೆ ಹೋಗುವವರು ಯಾರು?
Advertisement
ಪಂದ್ಯ ರದ್ದಾದರೆ ಮುಂದೇನು?
ಒಂದು ವೇಳೆ ಮಳೆ ಕಾಟ ಮುಂದುವರಿದು ಪಂದ್ಯ ರದ್ದಾದ್ರೆ ಶ್ರೀಲಂಕಾ (SriLanka) ಫೈನಲ್ ಪ್ರವೇಶಿಸಲಿದೆ. ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ಸೂಪರ್-4 ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿತ್ತು. ಹೀಗಾಗಿ 2ನೇ ದಿನ ಆಟ ಮುಂದುವರಿದ ಪರಿಣಾಮ ಭಾರತ ಪಾಕ್ ವಿರುದ್ಧ 228 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಯಾವುದೇ ಮೀಸಲು ದಿನ ನಿಗದಿಯಾಗಿಲ್ಲ. ಸೂಪರ್-4ನಲ್ಲಿ ಆಡಿದ ಎರಡು ಪಂದ್ಯಗಳನ್ನೂ ಗೆದ್ದಿರುವ ಭಾರತ 4 ಅಂಕದೊಂದಿಗೆ 2.690 ನೆಟ್ ರನ್ ರೇಟ್‌ನೊಂದಿಗೆ ಈಗಾಗಲೇ ಫೈನಲ್ ಪ್ರವೇಶ ಮಾಡಿದೆ. ಇದನ್ನೂ ಓದಿ: Asia Cup 2023ː ಬಿಗಿ ಬೌಲಿಂಗ್ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್‌ಗಳ ಭರ್ಜರಿ ಜಯ
ಶ್ರೀಲಂಕಾ ಎರಡು ಪಂದ್ಯಗಳಿಂದ 2 ಅಂಕ ಸಂಪಾದಿಸಿದೆ -0.200 ನೆಟ್ ರನ್ ರೇಟ್ ಹೊಂದಿದ್ದರೆ ಪಾಕಿಸ್ತಾನ 2 ಪಂದ್ಯಗಳಿಂದ 2 ಅಂಕ ಸಂಪಾದಿಸಿ -1.892 ನೆಟ್ ರನ್ ರೇಟ್‌ನೊಂದಿಗೆ 3ನೇ ಸ್ಥಾನ ಪಡೆದಿದೆ. ನೆಟ್ ರನ್ ರೇಟ್ ಉತ್ತಮವಾಗಿರುವ ಕಾರಣ ಮಳೆಯಿಂದಾಗಿ ಪಂದ್ಯ ರದ್ದಾದರೆ, ಶ್ರೀಲಂಕಾ ತಂಡ ಸುಲಭವಾಗಿ ಫೈನಲ್ ಪ್ರವೇಶ ಮಾಡಲಿದೆ.
Web Stories