– ಸಚಿನ್, ದ್ರಾವಿಡ್, ಗಂಗೂಲಿ ದಿಗ್ಗಜರ ಸಾಲಿಗೆ ಕೊಹ್ಲಿ
ಲಂಡನ್: ಓವೆಲ್ ಕ್ರೀಡಾಂಗಣ ನಡೆಯುತ್ತಿರುವ ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಹತ್ವದ ಸಾಧನೆ ಮಾಡಿದ್ದು, ವಿಶ್ವ ಕ್ರಿಕೆಟ್‍ನಲ್ಲಿ ವೇಗವಾಗಿ 18 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
Advertisement
ಕೊಹ್ಲಿ 382 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದು, ಈ ಹಿಂದೆ ವೆಸ್ಟ್ ಇಂಡೀಸ್‍ನ ಬ್ರಿಯಾನ್ ಲಾರಾ 411 ಇನ್ನಿಂಗ್ಸ್ 18 ಸಾವಿರ ರನ್ ಪೂರೈಸಿದ್ದರು. ಇನ್ನು ಸಚಿನ್ ತೆಂಡೂಲ್ಕರ್ 412 ಇನ್ನಿಂಗ್ಸ್‍ಗಳಲ್ಲಿ ಈ ಸಾಧನೆ ಮಾಡಿದ್ದರು. ಟೀಂ ಇಂಡಿಯಾ ಪರ ಸಚಿನ್ (34,357) ಸೇರಿದಂತೆ ರಾಹುಲ್ ದ್ರಾವಿಡ್ (24,208), ಸೌರವ್ ಗಂಗೂಲಿ (18,575) ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಕೊಹ್ಲಿ ಟೀಂ ಇಂಡಿಯಾ ಪರ 18 ಸಾವಿರ ರನ್ ಪೂರೈಸಿದ 4ನೇ ಆಟಗಾರನಾಗಿ ದಿಗ್ಗಜರ ಸಾಲಿಗೆ ಸೇರಿದ್ದಾರೆ.
Advertisement
Virat Kohli completes 18000 runs in International cricket in 382 innings – The quickest to the milestone.
Prev: Brian Lara in 411 innings and Sachin Tendulkar in 412 innings. #ENGvIND
— Sampath Bandarupalli (@SampathStats) September 8, 2018
Advertisement
ಅಂತಿಮ 5ನೇ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕದಿಂದ ವಂಚಿತರಾದ ಕೊಹ್ಲಿ 49 ರನ್ ಗಳಿಗೆ ಬೇನ್ ಸ್ಟೋಕ್ಸ್‍ಗೆ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ 174 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸುವ ಸಂಕಷ್ಟದಲ್ಲಿದ್ದು, ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಲು ಇನ್ನು 158 ರನ್ ಗಳಿಸಬೇಕಿದೆ. ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ಹನುಮ ವಿಹಾರಿ 25 ರನ್ ಮತ್ತು ಜಡೇಜಾ 8 ರನ್ ಗಳಿಸಿ 3ನೇ ದಿನದಾಟಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
Advertisement
ಕೊಹ್ಲಿ ರನ್ ಸಾಧನೆ:
15 ಸಾವಿರ ರನ್ (333 ಇನ್ನಿಂಗ್ಸ್)
16 ಸಾವಿರ ರನ್ (350 ಇನ್ನಿಂಗ್ಸ್)
17 ಸಾವಿರ ರನ್ (363 ಇನ್ನಿಂಗ್ಸ್)
18 ಸಾವಿರ ರನ್ (382 ಇನ್ನಿಂಗ್ಸ್)
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Dismissed on 49 in all the three formats (Tests, ODI, T20I):
AB de Villiers
MS Dhoni
VIRAT KOHLI#ENGvIND
— Sampath Bandarupalli (@SampathStats) September 8, 2018