ನ್ಯೂಯಾರ್ಕ್: ಫೋರ್ಬ್ಸ್ ಸಂಸ್ಥೆ ಬಿಡುಗಡೆಗೊಳಿಸಿರುವ ವಿಶ್ವದ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರರಾಗಿದ್ದಾರೆ.
ಫೋಬ್ರ್ಸ್ ಪಟ್ಟಿಯ ಅನ್ವಯ ವಿರಾಟ್ ಕೊಹ್ಲಿ ಅವರ ಆದಾಯ 24 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 160,64,40,000 ಕೋಟಿ ರೂ.) ಗಳಷ್ಟಿದ್ದು, ಪಟ್ಟಿಯಲ್ಲಿ 83ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಪಟ್ಟಿಯಲ್ಲಿ ಅಮೆರಿಕಾದ ಬಾಕ್ಸಿಂಗ್ ಚಾಂಪಿಯನ್ ಮೇ ವೇದರ್ 285 ಡಾಲರ್ ಮಿಲಿಯನ್ (ಸುಮಾರು 1639,79,72,500 ಕೋಟಿ ರೂ.) ಆದಾಯ ಗಳಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ.
Advertisement
Advertisement
ಫೋರ್ಬ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಅನ್ವಯ ಕೊಹ್ಲಿ ವಿಶ್ವ ಕ್ರೀಡಾಪಟುಗಳಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು, ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ 2.5 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ ಎಂದು ತಿಳಿಸಿದೆ.
Advertisement
ಪ್ರಸಕ್ತ ಸಾಲಿನಲ್ಲಿ ಬಿಸಿಸಿಐ ಸಂಸ್ಥೆ ವಿರಾಟ್ ಕೊಹ್ಲಿ ಅವರೊಂದಿಗೆ ನೂತನ `ಎ’ ಪ್ಲಸ್ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ಕೊಹ್ಲಿ ವಾರ್ಷಿಕವಾಗಿ 1 ಮಿಲಿಯನ್ ಯುಎಸ್ ಡಾಲರ್ (ಸುಮಾರು 6,68,95,000 ಕೋಟಿ ರೂ.) ಹಣವನ್ನು ಪಡೆಯಲಿದ್ದಾರೆ. ಅಲ್ಲದೇ ಹಲವು ಖಾಸಗಿ ಸಂಸ್ಥೆಗಳ ಸಹ ಪ್ರಚಾರ ರಾಯಭಾರಿಯಾಗಿರುವ ಕೊಹ್ಲಿ ಹೆಚ್ಚಿನ ಆದಾಯ ಗಳಿಸಿದ್ದಾರೆ.
Advertisement
ಈ ಬಾರಿಯ ನೂತನ ಫೋರ್ಬ್ಸ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಮಹಿಳಾ ಆಟಗಾರ್ತಿಯರು ಸ್ಥಾನ ಪಡೆದಿಲ್ಲ ಎಂಬುವುದು ವಿಶೇಷವಾಗಿದೆ. ಇನ್ನು ಕಳೆದ ಬಾರಿ ಬಿಡುಗಡೆ ಮಾಡಲಾಗಿದ್ದ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಟೆನಿಸ್ ಸ್ಟಾರ್ ಆಟಗಾರ್ತಿಯಾರದ ಚೀನಾದ ಲೀ ನಾ, ರಷ್ಯಾದ ಮರಿಯಾ ಶರಪೋವಾ ಹಾಗೂ ಅಮೆರಿಕದ ಸೆರೆನಾ ವಿಲಿಯಮ್ಸ್ ಈ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. 2014 ರಲ್ಲಿ ಲೀ ನಾ ತಮ್ಮ ಕ್ರೀಡೆಯಿಂದ ನಿವೃತ್ತಿ ಪಡೆದಿದ್ದಾರೆ. ಮರಿಯಾ ಶರಪೋವಾ ನಿಷೇಧಕ್ಕೆ ಒಳಗಾಗಿದ್ದಾರೆ. ಟೆನಿಸ್ ಆಟಗಾರ್ತಿ ಸೆರೆನಾ ಕಳೆದ ಬಾರಿ ಹೊಂದಿದ್ದ 8 ಮಿಲಿಯನ್ ಡಾಲರ್ ಆದಾಯ 62 ಸಾವಿರ ಡಾಲರ್ ಗೆ ಇಳಿಕೆಯಾಗಿದೆ. ಸೆರೆನಾ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಯಾವುದೇ ಟೂರ್ನಿಗಳಲ್ಲಿ ಭಾಗವಹಿಸಿರಲಿಲ್ಲ.