ನವದೆಹಲಿ: ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಹಿಳೆಯರ ತಂಡದ ನಾಯಕಿ ಮಿಥಾಲಿ ರಾಜ್ 2017 ರ ವಿಸ್ಡನ್ ವರ್ಷದ ಕ್ರಿಕೆಟ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಕೊಹ್ಲಿ ಸತತ ಎರಡನೇ ಬಾರಿಗೆ ಈ ಗೌರವಕ್ಕೆ ಪಾತ್ರರಾಗಿದ್ದು, 2016 ರಲ್ಲೂ ಕೊಹ್ಲಿಗೆ ಈ ಗೌರವ ಸಿಕ್ಕಿತ್ತು. ಈ ಹಿಂದೆ ಭಾರತದ ವಿರೇಂದ್ರ ಸೆಹ್ವಾಗ್ ಹಾಗೂ ಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರು ಎರಡು ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದರು.
Advertisement
Advertisement
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ ಕೊಹ್ಲಿ ಹಾಗೂ ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ವಿಶ್ವಕಪ್ ಫೈನಲ್ ವರೆಗೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಹಿನ್ನೆಲೆಯಲ್ಲಿ ಈ ಗೌರವ ಒಲಿದಿದೆ.
Advertisement
2017 ರಲ್ಲಿ ವಿರಾಟ್ ಕೊಹ್ಲಿ 2,818 ರನ್ ಸಿಡಿಸಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಅಲ್ಲದೇ ಟೆಸ್ಟ್ ಪಂದ್ಯದಲ್ಲಿ ಮೂರು ದ್ವಿಶತಕ ಹಾಗೂ ಇನ್ನೆರಡು ಅಜೇಯ ಶತಕಗಳನ್ನು ಸಿಡಿಸಿ ಒಟ್ಟು 1,460 ರನ್ ಗಳಿಸಿದ್ದಾರೆ. ಅದ್ದರಿಂದ ಕೊಹ್ಲಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಿರುವುದಾಗಿ ವಿಸ್ಡನ್ ಸಂಪಾದಕ ಲಾರೆನ್ಸ್ ಹೇಳಿದ್ದಾರೆ.
Advertisement
ಮಿಥಾಲಿ ರಾಜ್: ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ವಿಶ್ವದ ಮಹಿಳಾ ಲೀಡಿಂಗ್ ಕ್ರಿಕೆಟರ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಮಿಥಾಲಿ ರಾಜ್ ಕೆಲ ದಿನಗಳ ಹಿಂದೆ ವಿಶ್ವದ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಏಕದಿನ ಪಂದ್ಯಗಳಾಡಿದ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದರು. ಏಕದಿನ ಕ್ರಿಕೆಟ್ ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದ ಸಾಧನೆಯೂ ಇವರ ಹೆಸರಿನಲ್ಲಿದೆ. ಅಲ್ಲದೇ ಸತತ ಏಳು ಅರ್ಧಶತಕ ಸಿಡಿಸುವ ಮೂಲಕ ಮತ್ತೊಂದು ದಾಖಲೆ ಮಾಡಿದ್ದಾರೆ.