ಲಂಡನ್: ವಿಶ್ವಕಪ್ ಕ್ರಿಕೆಟ್ ಅಭ್ಯಾಸದ ವೇಳೆ ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಗಾಯಗೊಂಡಿದ್ದಾರೆ.
ತರಬೇತಿಯಲ್ಲಿ ಪಾಲ್ಗೊಂಡಿದ್ದ ನಾಯಕ ಕೊಹ್ಲಿ ನೆಟ್‍ನಲ್ಲಿ ಬೆವರಿಳಿಸಿದ್ದರು. ಈ ಸಂದರ್ಭದಲ್ಲಿ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಗಾಯದ ತೀವ್ರತೆ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ. ಗಾಯಗೊಂಡ ವೇಳೆ ಕೊಹ್ಲಿ ತಮ್ಮ ಬೆರಳನ್ನು ಐಸ್ ನಲ್ಲಿ ಡಿಪ್ ಮಾಡಿದ್ದರು. ತಂಡದ ತಜ್ಞ ವೈದ್ಯರು ಗಾಯಕ್ಕೆ ಚಿಕಿತ್ಸೆ ನೀಡಿದ ಬಳಿಕ ಅವರು ತರಬೇತಿ ಮುಂದುವರಿಸದೇ ಮೈದಾನದಿಂದ ಹೊರ ನಡೆದರು.
Advertisement
A full fledged training session here at Southampton for #TeamIndia pic.twitter.com/YJG7g9idlI
— BCCI (@BCCI) June 1, 2019
Advertisement
ಕೊಹ್ಲಿ ಗಾಯದ ತೀವ್ರತೆಯ ಬಗ್ಗೆ ಟೀಂ ಇಂಡಿಯಾ ಮ್ಯಾನೇಜ್‍ಮೆಂಟ್ ಇದುವರೆಗೂ ಯಾವುದೇ ಸ್ಪಷ್ಟನೆಯನ್ನ ನೀಡಿಲ್ಲ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ 3 ದಿನಗಳು ಬಾಕಿ ಇರುವ ವೇಳೆಯೇ ಘಟನೆ ನಡೆದಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
Advertisement
ಐಪಿಎಲ್ ಟೂರ್ನಿಯ ವೇಳೆ ಗಾಯಗೊಂಡಿದ್ದ ಕೇದಾರ್ ಜಾಧವ್ ಕೂಡ ಚೇತರಿಕೊಳ್ಳುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯಕ್ಕೆ ಮುನ್ನ ಗಾಯಗೊಂಡಿದ್ದ ವಿಜಯ್ ಶಂಕರ್ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.