ಢಾಕಾ: ಬಾಂಗ್ಲಾದೇಶದ (Bangladesh) ಮೀರ್‌ಪುರದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವನ್ನು (Test Cricket) ಭಾರತ 3 ವಿಕೆಟ್‌ಗಳಿಂದ ಜಯಗಳಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಈ ಪಂದ್ಯದಲ್ಲಿ ತನ್ನ ವಿಕೆಟ್ ಪಡೆದ ಬಾಂಗ್ಲಾದೇಶದ ಆಫ್ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್‌ಗೆ (Mehidy Hasan Miraz) ವಿರಾಟ್ ಕೊಹ್ಲಿ (Virat Kohli) ವಿಶೇಷ ಉಡುಗೊರೆ ನೀಡಿ ಅಭಿನಂದಿಸಿದ್ದಾರೆ.
Special souvenir from one of the greatest cricketer Virat Kohli. ???? pic.twitter.com/y67twA2Rle
— Mehidy Hasan Miraz (@Officialmiraz) December 25, 2022
Advertisement
2ನೇ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ದಾಳಿ ನಡೆಸಿದ ಮಿರಾಜ್ ಟೀಂ ಇಂಡಿಯಾ (Team India) ಎದುರು ಅಬ್ಬರಿಸಿದರು. 6 ಓವರ್‌ಗಳಲ್ಲಿ 36 ರನ್ ನೀಡಿ ಪ್ರಮುಖ 6 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಇದೇ ವೇಳೆ ತಮ್ಮ ಸ್ಪಿನ್ ಕೈಚಳಕದಿಂದ ಟೀಂ ಇಂಡಿಯಾ ಬ್ಯಾಟ್ಸ್‌ಮ್ಯಾನ್ ವಿರಾಟ್ ಕೊಹ್ಲಿ ಅವರನ್ನ ಕೇವಲ 1 ರನ್‌ಗಳಿಗೆ ಔಟ್ ಮಾಡಿ ಪೆವಿಲಿಯನ್ ದಾರಿ ತೋರಿಸಿದ್ರು. ಇದರಿಂದ ಮಿರಾಜ್ ಬೌಲಿಂಗ್ ಕೈಚಳಕ ಮೆಚ್ಚಿಕೊಂಡ ಕೊಹ್ಲಿ ತಮ್ಮ ವಿಕೆಟ್ ಪಡೆದಿದ್ದಕ್ಕಾಗಿ ಸ್ಮರಣಿಕೆಯಾಗಿ ಸಹಿ ಮಾಡಿದ ಜೆರ್ಸಿ ನೀಡಿ ಅಭಿನಂದಿಸಿದ್ದಾರೆ.
Advertisement
Advertisement
ಮೊದಲ ಟೆಸ್ಟ್ ಪಂದ್ಯದಲ್ಲಿ 188 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ 2ನೇ ಟೆಸ್ಟ್‌ನಲ್ಲಿ 3 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಇದನ್ನೂ ಓದಿ: ಅಶ್ವಿನ್, ಅಯ್ಯರ್ ಭರ್ಜರಿ ಬ್ಯಾಟಿಂಗ್ – ಕ್ಲೀನ್ ಸ್ವೀಪ್‌ಗೈದ ಭಾರತ
Advertisement
2000 ಇಸವಿಯಿಂದ ಈವರೆಗೆ ನಡೆದ ಬಾಂಗ್ಲಾದೇಶ ಹಾಗೂ ಭಾರತದ ನಡುವಿನ 12 ಟೆಸ್ಟ್ ಪಂದ್ಯಗಳಲ್ಲಿ ಭಾರತ 10 ರಲ್ಲಿ ಜಯ ಸಾಧಿಸಿದೆ. 2015ರಲ್ಲಿ ಎರಡು ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದ್ದವು. ಇದನ್ನೂ ಓದಿ: #WTC2023 ಫೈನಲ್ ರೇಸ್‍ನಲ್ಲಿ ಭಾರತ – ಆಸೀಸ್ ಸರಣಿ ನಿರ್ಣಾಯಕ