ಮೀರ್‌ಪುರ್: ಅಶ್ವಿನ್(Ashwin) ಮತ್ತು ಶ್ರೇಯಸ್ ಅಯ್ಯರ್(Shreyas Iyer) ಸಾಹಸದಿಂದ ಬಾಂಗ್ಲಾದೇಶದ(Bangladesh) ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ(India) 3 ವಿಕೆಟ್‌ಗಳಿಂದ ಜಯಗಳಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ 145 ರನ್ ಗುರಿ ಪಡೆದ ಭಾರತ ಶ್ರೇಯಸ್ ಅಯ್ಯರ್ ಮತ್ತು ಅಶ್ವಿನ್ ಅವರು ಮುರಿಯದ 8ನೇ ವಿಕೆಟಿಗೆ 105 ಎಸೆತಗಳಲ್ಲಿ 71 ರನ್ ಜೊತೆಯಾಟವಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಅಂತಿಮವಾಗಿ ಇಬ್ಬರ ಉತ್ತಮ ಜೊತೆಯಾಟದಿಂದ ಭಾರತ 47 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 145 ರನ್ ಹೊಡೆಯಿತು.
ಮೂರನೇ ದಿನದಾಟಕ್ಕೆ 4 ವಿಕೆಟ್ ಕಳೆದುಕೊಂಡು 45 ರನ್‌ಗಳಿಸಿದ್ದ ಭಾರತ 29 ರನ್ ಸೇರಿಸಿ ಮೂರು ವಿಕೆಟ್ ಕಳೆದುಕೊಂಡಿತು. ಈ ಸಮಯದಲ್ಲಿ ಶ್ರೇಯಸ್ ಅಯ್ಯರ್‌ಗೆ ಅಶ್ವಿನ್ ಜೊತೆಯಾದರು. ಶ್ರೇಯಸ್ ಅಯ್ಯರ್ 29 ರನ್(46 ಎಸೆತ, 4 ಬೌಂಡರಿ) ಹೊಡೆದರೆ ಅಶ್ವಿನ್ 42 ರನ್(62 ಎಸೆತ, 4 ಬೌಂಡರಿ, 1 ಸಿಕ್ಸರ್) ಬಾರಿಸಿದರು.
ಅಕ್ಷರ್ ಪಟೇಲ್ 34 ರನ್, ಜಯದೇವ್ ಉನಾದ್ಕತ್ 13, ರಿಷಭ್ ಪಂತ್ 9 ರನ್ ಗಳಿಸಿ ಔಟಾದರು. ಮೊದಲ ಟೆಸ್ಟ್ ಪಂದ್ಯವನ್ನು ಭಾರತ 188 ರನ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 227
ಭಾರತ ಮೊದಲ ಇನ್ನಿಂಗ್ಸ್ 314
ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ 231
ಭಾರತ ಎರಡನೇ ಇನ್ನಿಂಗ್ಸ್ 145