ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ (Team India) ಹಾಗೂ ಪಾಕ್ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದ ಬಳಿಕ ಕೊಹ್ಲಿ (Virat Kohli) ತಮ್ಮ ಹಸ್ತಾಕ್ಷರವುಳ್ಳ ಭಾರತ ತಂಡದ 2 ಜೆರ್ಸಿಗಳನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂಗೆ (Babar Azam) ನೀಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ರಾಜಕೀಯ ಬಿಕ್ಕಟ್ಟಿದೆ. ಆದರೆ ಎರಡು ತಂಡಗಳ ಆಟಗಾರರು ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಮೈದಾನದಲ್ಲೇ ಕೊಹ್ಲಿ, ಅಜಂಗೆ ಜರ್ಸಿ ನೀಡುವುದರ ಮೂಲಕ ಅಭಿಮಾನಿಗಳ ಹೃದಯಗೆದ್ದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದನ್ನೂ ಓದಿ: ಸಿಕ್ಸ್ ಸಿಡಿಸಿ ದಾಖಲೆ ಬರೆದ ರೋಹಿತ್ ಶರ್ಮಾ
Advertisement
Advertisement
ಈ ವಿಚಾರವಾಗಿ ಪಾಕ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ವಾಗ್ದಾಳಿ ನಡೆಸಿದ್ದಾರೆ. ಅದು ಖಾಸಗಿ ಸ್ವತ್ತಲ್ಲ, ಸಾರ್ವಜನಿಕವಾಗಿರುವುದು. ಜೆರ್ಸಿ ಕೊಡುವುದಿದ್ದರೆ ಡ್ರೆಸ್ಸಿಂಗ್ ರೂಮ್‍ನಲ್ಲಿ ಕೊಡಲಿ ಎಂದು ಕಿಡಿಕಾರಿದ್ದಾರೆ.
Advertisement
ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಪಾಕ್ ವಿರುದ್ಧ ವಿಶ್ವಕಪ್‍ನಲ್ಲಿ 8-0 ಅಜೇಯ ಓಟ ಮುಂದುವರಿದಿದೆ.
Advertisement
ಗೆಲ್ಲಲು 192 ರನ್‍ಗಳ ಗುರಿಯನ್ನು ಪಡೆದ ಭಾರತ ಇನ್ನೂ 117 ಎಸೆತ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 192 ರನ್ ಹೊಡೆಯುವ ಮೂಲಕ ಗೆಲುವನ್ನು ಸಾಧಿಸಿತು. ಹ್ಯಾಟ್ರಿಕ್ ಜಯದೊಂದಿಗೆ ಭಾರತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಇದನ್ನೂ ಓದಿ: Record… Record… Record: ಇಂಡೋ-ಪಾಕ್ ಕದನದಲ್ಲಿ ಎಲ್ಲಾ ದಾಖಲೆ ಉಡೀಸ್!
Web Stories