ದುಬೈ: ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲೂ ಆಸೀಸ್ ಆಟಗಾರ ಸ್ಟೀವ್ ಸ್ಮಿತ್‍ರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 200 ರನ್ ಸಿಡಿಸಿದ ಕೊಹ್ಲಿ ಈ ಸಾಧನೆಯ ಜೊತೆ ಮತ್ತೊಂದು ಸಾಧನೆಯನ್ನು ನಿರ್ಮಿಸಿದ್ದಾರೆ. ಟೀಂ ಇಂಡಿಯಾ ಪರವಾಗಿ ಸಚಿನ್ ಬಳಿಕ ನಂ.1 ಪಟ್ಟಕ್ಕೆ ಏರಿದ ಬ್ಯಾಟ್ಸ್ ಮನ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಅಂದಹಾಗೇ 2011 ರಲ್ಲಿ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‍ನಲ್ಲಿ ನಂ.1 ಸ್ಥಾನ ಪಡೆದಿದ್ದರು.
Advertisement
Advertisement
ಬರ್ಮಿಗ್‍ಹ್ಯಾಮ್ ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 149 ರನ್ ಸಿಡಿಸಿದ್ದ ಕೊಹ್ಲಿ, 2ನೇ ಇನ್ನಿಂಗ್ಸ್ ನಲ್ಲಿ 51 ರನ್ ಗಳಿಸಿ ಮಿಂಚಿದ್ದರು. ಈ ಮೂಲಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಜೀವನ ಶ್ರೇಷ್ಠ 934 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ 1 ವರ್ಷ ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ 929 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಹಿಂಬಡ್ತಿ ಹೊಂದಿದ್ದಾರೆ. 3ನೇ ಸ್ಥಾನವನ್ನು 865 ಅಂಕಗಳೊಂದಿಗೆ ಇಂಗ್ಲೆಂಡ್ ತಂಡದ ಜೋ ರೂಟ್ ಪಡೆದಿದ್ದಾರೆ.
Advertisement
ಗವಾಸ್ಕರ್ ದಾಖಲೆ ಉಡಿಸ್: ಟೆಸ್ಟ್ ನಂ. ಬ್ಯಾಟ್ಸ್ ಮನ್ ಆಗಿ 934 ಅಂಕಗಳನ್ನು ಪಡೆದಿರುವ ಕೊಹ್ಲಿ ಟೀಂ ಇಂಡಿಯಾ ಪರ ವೈಯಕ್ತಿಕವಾಗಿ ಅತೀ ಹೆಚ್ಚು ಅಂಕ ಪಡೆದ ಆಟಗಾರರಾಗಿದ್ದು, ಈ ಹಿಂದೆ ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ 916 ಅಂಕ ಪಡೆದಿದ್ದರು. ಉಳಿದಂತೆ ವಿಶ್ವ ಕ್ರಿಕೆಟ್ ನಲ್ಲಿ ಡೊನಾಲ್ಡ್ ಬ್ರಾಡ್ಮನ್ (961), ಸ್ಟೀವ್ ಸ್ಮಿತ್ (947) ನಂತರದ ಸ್ಥಾನದಲ್ಲಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಪರ ಈ ಹಿಂದೆ ಸಚಿನ್ ತೆಂಡೂಲ್ಕರ್, ದಿಲೀಪ್ ವೆಂಗ್‍ಸರ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಈ ಸಾಧನೆ ಮಾಡಿದ್ದರು.
Advertisement
ಪ್ರಸ್ತುತ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ ನಂಬರ್ ಒನ್ ಸ್ಥಾನದಲ್ಲಿದ್ದರೆ, ಟಿ 20 ಯಲ್ಲಿ 12ನೇ ಸ್ಥಾನದಲ್ಲಿದ್ದಾರೆ.
ಸದ್ಯ ಐಸಿಸಿ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ ಟೀಂ ಇಂಡಿಯಾದ ಚೇತೇಶ್ವರ ಪೂಜಾರಾ 791 ಅಂಕಗಳೊಂದಿಗೆ 6, ಕೆಎಲ್ ರಾಹುಲ್ 1 ಸ್ಥಾನ ಕುಸಿತಗೊಂಡು 19 ಹಾಗೂ ರಹಾನೆ 3 ಸ್ಥಾನ ಕಳೆದುಕೊಂಡು 22ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಶಿಖರ್ ಧವನ್ ಹಾಗೂ ಮುರಳಿ ವಿಜಯ್ 25 ಸ್ಥಾನ ಪಡೆದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜಾ 3 ಹಾಗೂ ಆರ್ ಆಶ್ವಿನ್ 5 ಸ್ಥಾನ ಪಡೆದು ಟಾಪ್ ಬೌಲರ್ ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದಂತೆ ಮಹಮ್ಮದ್ ಶಮಿ 19 ಹಾಗೂ ಇಶಾಂತ್ ಶರ್ಮಾ 25ನೇ ಸ್ಥಾನ ಪಡೆದಿದ್ದಾರೆ.
KOHLI ON TOP!@imVkohli is in august company at the top of the Indian batsmen's charts in the @MRFWorldwide Test rankings.
READ ⬇️https://t.co/f9fQXGt13j pic.twitter.com/vRJZIfOWpd
— ICC (@ICC) August 5, 2018
Best batting rating achieved by Indians in Test cricket:
934 – VIRAT KOHLI, 2018*
916 – Sunil Gavaskar, 1979
898 – Sachin Tendulkar, 2002
892 – Rahul Dravid, 2005#ENGvIND
— Sampath Bandarupalli (@SampathStats) August 5, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews