Connect with us

Cricket

ಕೊಹ್ಲಿ ದೊಡ್ಡ ಅಭಿಮಾನಿ ಎಂದು ಸಾಬೀತುಪಡಿಸಲು ವಿರಾಟ್ ಸಾಧನೆ ಒಳಗೊಂಡ 16 ಹಚ್ಚೆ ಹಾಕಿಸಿಕೊಂಡ

Published

on

ಕಟಕ್: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ, ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಅತಿದೊಡ್ಡ ಅಭಿಮಾನಿ ಎಂದು ಸಾಬೀತುಪಡಿಸಲು ಒಡಿಶಾದ ವ್ಯಕ್ತಿಯೊಬ್ಬರು ಇಡೀ ದೇಹದ ಮೇಲೆ 16 ಹಚ್ಚೆ ಹಾಕಿಸಿಕೊಂಡಿದ್ದಾರೆ.

ಬಹರಂಪುರದ ಪಿಂಟು ಬೆಹೆರಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹಚ್ಚೆಗಳು ವಿರಾಟ್ ಅವರ ಸಾಧನೆಗಳನ್ನು ಸೇರಿದಂತೆ ಜರ್ಸಿ ಸಂಖ್ಯೆ 18ರ ಸಹ ತಿಳಿಸುತ್ತವೆ. ಭಾರತದ ಪ್ರತಿ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುತ್ತೇನೆ. ಯಾವಾಗಲೂ ವಿರಾಟ್ ಕೊಹ್ಲಿ ಅವರನ್ನು ಹುರಿದುಂಬಿಸುತ್ತೇನೆ ಎಂದು ಪಿಂಟು ಹೇಳುತ್ತಾರೆ.

31 ವರ್ಷದ ಪಿಂಟು ಬೆಹೆರಾಸಣ್ಣ ಗುತ್ತಿಗೆದಾರರಾಗಿದ್ದಾರೆ. ದೀರ್ಘ ಕಾಲದ ನಂತರ, ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರನ್ನು ವಿಶಾಖಪಟ್ಟಣಂನಲ್ಲಿ ಭೇಟಿಯಾದೆ. ಆಗ ವಿರಾಟ್ ನನ್ನನ್ನು ತಬ್ಬಿಕೊಂಡರು. ಆ ಗಳಿಗೆ ನನಗೆ ದೊಡ್ಡ ಸಾಧನೆ ಅನಿಸಿತು ಎಂದು ಪಿಂಟು ಹೇಳಿದ್ದಾರೆ.

2016ರಲ್ಲಿ ನಾನು ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ ಎಂದು ಸಾಬೀತುಪಡಿಸಲು ಬಯಸಿದೆ. ಅದಕ್ಕಾಗಿ ನಾನು ಹಚ್ಚೆ ಹಾಕಲು ಯೋಚಿಸಿದೆ. ಹಚ್ಚೆ ಹಾಕಿಸಿಕೊಳ್ಳಲು ನನ್ನ ಬಳಿ ಸಾಕಷ್ಟು ಹಣವಿಲ್ಲದಿದ್ದರೂ, ನಿಧಾನವಾಗಿ ಹಣ ಸೇರಿಸಲು ಪ್ರಾರಂಭಿಸಿದೆ. ಬಳಿಕ ಒಂದೊಂದಾಗಿ ಹಚ್ಚೆ ಹಾಕಿಸಿಕೊಂಡೆ ಎಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *