ಅಡಿಲೇಡ್: ಆಸ್ಟೇಲಿಯಾ ಮತ್ತು ಭಾರತದ ನಡುವಿನ ಟೆಸ್ಟ್ ಸರಣಿ ಗುರುವಾರದಿಂದ ಆರಂಭವಾಗಲಿದೆ. ಈಗಾಗಲೇ ಎರಡು ತಂಡಗಳು ಅಭ್ಯಾಸದಲ್ಲಿ ತೊಡಗಿಸಿಕೊಂಡಿವೆ. ನೆಟ್ ಪ್ರಾಕ್ಟಿಸ್ ವೇಳೆ ಭಾರತೀಯ ಬೌಲರ್ ಮೊಹಮ್ಮದ್ ಶಮಿ ಎಸೆತವನ್ನು ಎದುರಿಸಲು ನಾಯಕ ವಿರಾಟ್ ಕೊಹ್ಲಿ ವಿಫಲವಾಗಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಶಮಿ ಬೌಲಿಂಗ್ ಎದುರಿಸಲು ಎದುರಾಳಿಗಳು ಒಂದು ಕ್ಷಣ ವಿಚಲಿತರಾಗುತ್ತಾರೆ. ಪ್ರತಿಯೊಂದು ಎಸೆತವನ್ನು ಬ್ಯಾಟ್ಸ್ ಮ್ಯಾನ್ ಗಳು ಅಷ್ಟೇ ಲೆಕ್ಕಾಚಾರದಿಂದ ಎದುರಿಸುತ್ತಾರೆ. ನೆಟ್ ಪ್ರಾಕ್ಟಿಸ್ ನಲ್ಲಿ ಎಸೆದ ಶಮಿ ಎಸೆದ ಚೆಂಡು ಸ್ವಲ್ಪದರಲ್ಲಿಯೇ ವಿರಾಟ್ ಕೊಹ್ಲಿ ತಲೆಗೆ ತಾಗುತ್ತಿತ್ತು. ಕೂಡಲೇ ಕೊಹ್ಲಿ ತಲೆ ತಗ್ಗಿಸಿ ಬಚಾವ್ ಆಗಿದ್ದಾರೆ.
Advertisement
Advertisement
ಮೂರನೇ ಟಿ-20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಯ ಭರ್ಜರಿ ಆಟ ಈಗಾಗಲೇ ನಡುಕ ಹುಟ್ಟಿಸಿದೆ. ಅಲ್ಲದೇ ಮುಂಬರುವ ಟೆಸ್ಟ್ ಸರಣಿಯಲ್ಲೂ ಕೊಹ್ಲಿ ಇದೇ ರೀತಿ ತನ್ನ ನಾಗಾಲೋಟವನ್ನು ಮುಂದುವರಿಸಿದರೆ ಸರಣಿ ಸೋಲನ್ನು ಅನುಭವಿಸುವುದು ನಿಜವೆಂದು ಭಾವಿಸಲಾಗಿದೆ. ಹೀಗಾಗಿ ಖುದ್ದು ಆಸೀಸ್ ತಂಡ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಕ್ಕೊಳಗಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಆಟಗಾರರ ಮೊರೆ ಹೋಗಿದೆ. ಅಲ್ಲದೇ ಇಬ್ಬರೂ ಆಟಗಾರರು ಕೊಹ್ಲಿಯನ್ನು ಕಟ್ಟಿಹಾಕುವ ಕುರಿತು ಕೆಲ ಮಾಹಿತಿಗಳನ್ನು ಆಸೀಸ್ ಆಟಗಾರರೊಂದಿಗೆ ಹಂಚಿಕೊಂಡಿದ್ದಾರೆಂದು ಹೇಳಲಾಗಿದೆ.
Advertisement
ಇದಲ್ಲದೇ ಸ್ಮಿತ್ ಹಾಗೂ ವಾರ್ನರ್ ಆಸ್ಟ್ರೇಲಿಯಾ ತಂಡದ ಜೊತೆಗೆ ನೆಟ್ ಪ್ರಾಕ್ಟೀಸ್ ಕೂಡ ನಡೆಸುತ್ತಿದ್ದಾರೆ. ಇದರ ಜೊತೆ ಬೌಲಿಂಗ್ ಕೋಚ್ ಹಾಗೂ ಬೌಲರ್ ಗಳು ತಮ್ಮ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.
Advertisement
ಕಳೆದ ಬಾರಿ ಆಸೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ 4 ಟೆಸ್ಟ್ ಪಂದ್ಯಗಳಲ್ಲಿ ಸೋತು ವೈಟ್ ವಾಶ್ ಆಗಿತ್ತು. ಆದರೆ ಈ ಬಾರಿ ಕೊಹ್ಲಿ ನಾಯಕತ್ವದ ಬಳಗ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವಿಪ್ ಮಾಡಿ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಆಸೀಸ್ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವ ಬಗ್ಗೆ ಈಗಾಗಲೇ ತಲೆನೋವು ಶುರುವಾಗಿದ್ದು, ಕೊಹ್ಲಿ ನಿಯಂತ್ರಿಸಲು ತಂತ್ರಗಳನ್ನು ರೂಪಿಸುತ್ತಿದೆ.
https://www.instagram.com/p/Bq9G9b0ggwr/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv