– ಫೈನಲ್‌ನಲ್ಲಿ 76 ರನ್ ಸಿಡಿಸಿ ಕಳಪೆ ಬ್ಯಾಟಿಂಗ್ ಹಣೆಪಟ್ಟಿ ಕಳಚಿದ ವಿರಾಟ್
ಬ್ರಿಡ್ಜ್‌ಸ್ಟೋನ್: 9ನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup 2024) ಗೆದ್ದು ಭಾರತ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ತಂಡಕ್ಕೆ ಗೆಲುವು ತಂದುಕೊಟ್ಟು ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಟಿ20ಗೆ ವಿದಾಯ ಹೇಳಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದರೂ, ಫೈನಲ್ ಪಂದ್ಯದಲ್ಲಿ ಭಾರತ ಗೆಲುವಿಗೆ ಕೊಹ್ಲಿ ಪ್ರಮುಖ ಪಾತ್ರ ವಹಿಸಿದರು.
Advertisement
ಕೊಹ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆದರೆ ವಿರಾಟ್ ಪಾಲಿಗೆ ಈ ಬಾರಿಯ ಟಿ20 ವಿಶ್ವಕಪ್ ಹೆಚ್ಚು ಸಂಭ್ರಮ ನೀಡುವಂಥದ್ದೇನು ಆಗಿರಲಿಲ್ಲ. ಏಕೆಂದರೆ ಫೈನಲ್‌ಗೂ ಮುನ್ನ ಕೊಹ್ಲಿ ಆಡಿದ 7 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 75 ರನ್. ಈ ಪೈಕಿ ಬಾಂಗ್ಲಾದೇಶದ ವಿರುದ್ಧ ಹೊಡೆದ 37 ರನ್ನೇ ಗರಿಷ್ಠವಾಗಿತ್ತು. ಅಷ್ಟೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿ ಕ್ರಿಕೆಟ್ ಪ್ರಿಯರ ಟೀಕೆಗೆ ಗುರಿಯಾಗಿದ್ದರು. ಇದನ್ನೂ ಓದಿ: 2 ಟಿ20 ವಿಶ್ವಕಪ್ – ಭಾರತದ ಪರ ವಿಶಿಷ್ಟ ದಾಖಲೆ ಬರೆದ ಹಿಟ್‌ಮ್ಯಾನ್
Advertisement
Advertisement
ವಿರಾಟ್ ಕೊಹ್ಲಿ ಶನಿವಾರ ಬಾರ್ಬಡೋಸ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್‌ನಲ್ಲಿ ಅರ್ಧಶತಕದೊಂದಿಗೆ ತಮ್ಮ ಕಳಪೆ ಫಾರ್ಮ್ ಎಂಬ ಹಣೆಪಟ್ಟಿಯಿಂದ ಮುಕ್ತರಾದರು. ಈ ಪಂದ್ಯದಲ್ಲಿ 48 ಎಸೆತಗಳಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸುವ ಮೂಲಕ ಅರ್ಧಶತಕ ಗಳಿಸಿದ್ದರು. ಅಲ್ಲದೇ ಫೈನಲ್ ಒಂದೇ ಪಂದ್ಯದಲ್ಲಿ 76 ರನ್ ಸಿಡಿಸಿದರು.
Advertisement
ಫೈನಲ್‌ನಲ್ಲಿ ಕೊಹ್ಲಿ ರೋಹಿತ್ ಶರ್ಮಾ ಅವರೊಂದಿಗೆ ಭಾರತಕ್ಕೆ ಇನ್ನಿಂಗ್ಸ್ ತೆರೆದರು. ಇವರಿಬ್ಬರು ಮೊದಲ ಓವರ್‌ನಲ್ಲಿ 15 ರನ್ ಗಳಿಸಿ ಚುರುಕಾದ ಆರಂಭವನ್ನು ಪಡೆದರು. ಆದಾಗ್ಯೂ, ರೋಹಿತ್ ಅವರನ್ನು ಎರಡನೇ ಓವರ್‌ನಲ್ಲಿ ಕೇಶವ್ ಮಹಾರಾಜ್ ಔಟ್ ಮಾಡಿದರು. ಅದರ ಬೆನ್ನಲ್ಲೇ ಕೇವಲ ಒಂದೆರಡು ಎಸೆತಗಳಲ್ಲಿ ಮೆನ್ ಇನ್ ಬ್ಲೂ ರಿಷಬ್ ಪಂತ್ ಅವರನ್ನು ಕಳೆದುಕೊಂಡಿತು. ಇದನ್ನೂ ಓದಿ: ವಿಶ್ವಕಪ್ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೊಹ್ಲಿ
ಸೂರ್ಯಕುಮಾರ್ ಯಾದವ್ ಔಟಾದ ನಂತರ ಭಾರತದ ಸ್ಕೋರ್ ಐದನೇ ಓವರ್‌ನಲ್ಲಿ 34/3 ಇತ್ತು. ಆದರೆ ಕೊಹ್ಲಿ ಮತ್ತು ಅಕ್ಸರ್ ಪಟೇಲ್ (47) ನಾಲ್ಕನೇ ವಿಕೆಟ್‌ಗೆ 72 ರನ್‌ಗಳ ಜೊತೆಯಾಟವಾಡಿ ಗಮನ ಸೆಳೆದರು. ಆಲ್‌ರೌಂಡರ್ ಅಕ್ಷರ್ 14 ನೇ ಓವರ್‌ನಲ್ಲಿ ರನೌಟ್ ಆದರು. 19ನೇ ಓವರ್‌ನಲ್ಲಿ ಮಾರ್ಕೊ ಜಾನ್ಸೆನ್ ಎಸೆತಕ್ಕೆ ಕೊಹ್ಲಿ (76 ರನ್) ಕ್ಯಾಚ್ ನೀಡಿ ಹೊರನಡೆದರು. ಭಾರತ 20 ಓವರ್‌ಗೆ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. 177 ರನ್ ಗುರಿ ಬೆನ್ನತ್ತಿದ ಆಫ್ರಿಕಾ ಪಡೆ ಸೋಲನುಭವಿಸಿತು. ಭಾರತ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಸಂಭ್ರಮಿಸಿತು.