ಚೇಸ್ ಮಾಸ್ಟರ್, ಸೂಪರ್ ಸ್ಟಾರ್ ಕ್ರಿಕೆಟಿಗ, ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಇಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 15 ವರ್ಷ ಕಳೆದಿದೆ. 2018ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಎಂಟ್ರಿ ಕೊಟ್ಟ ಇತಿಹಾಸ ಪುಟ ಸೇರಿದ್ದಾರೆ.
Congratulations to the incredible @imVkohli on 15 years of unwavering commitment to international cricket! Your passion, perseverance, and remarkable achievements have inspired millions. Wishing you continued success and many more milestones ahead! pic.twitter.com/oUsnAVLvqu
— Jay Shah (@JayShah) August 18, 2023
Advertisement
ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿ ಕೋಟ್ಯಂತರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾಜಿ ಹಾಗೂ ಹಾಲಿ ಕ್ರಿಕೆಟರ್‌ಗಳು ಶುಭಾಶಯದ ಹೂಮಳೆಗರೆದಿದ್ದಾರೆ. ಪ್ಲೇಯರ್ ಆಗಿ, ನಾಯಕನಾಗಿ, ಉಪನಾಯಕನಾಗಿ ಟೀಂ ಇಂಡಿಯಾಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತನಗಿಂತಲೂ ಕ್ರಿಕೆಟ್ ಲೋಕಕ್ಕೆ ಎಂಟ್ರಿಕೊಟ್ಟ ಅನೇಕ ದಿಗ್ಗಜರ ದಾಖಲೆಯನ್ನ ಮುರಿದು ಧೂಳೆಬ್ಬಿಸಿರುವ ವಿರಾಟ್ ಕೊಹ್ಲಿ ಇದೀಗ ವೃತ್ತಿ ಜೀವನದ ನಿರ್ಣಾಯಕ ಹಂತದಲ್ಲಿದ್ದಾರೆ. ಅಂದು ಸಾಮಾನ್ಯ ಹುಡುಗನಾಗಿ ಕ್ರಿಕೆಟ್ ಅಂಗಳಕ್ಕಿಳಿದ ಕೊಹ್ಲಿ ಇಂದು ಕಿಂಗ್ ಆಗಿ ಮೆರೆದಾಡುತ್ತಿದ್ದಾರೆ. ಇದನ್ನೂ ಓದಿ: ಸೋಲುವುದು ಕೂಡ ಒಳ್ಳೆಯದೇ, ಒಂದು ಸರಣಿ ಮ್ಯಾಟರ್ ಅಲ್ವೇ ಅಲ್ಲ – ಪಾಂಡ್ಯ ಸಮರ್ಥನೆ
Advertisement
ಕೊಹ್ಲಿ ಎಂಟ್ರಿ ಕೊಟ್ಟಿದ್ದು ಯಾವಾಗ?
2008ರ ಆಗಸ್ಟ್ 18ರಂದು ಶ್ರೀಲಂಕಾದ ಡಂಬುಲ್ಲಾ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಕೊಹ್ಲಿ, ಇಂದು ನಿರ್ಣಾಯಕ ಹಂತದಲ್ಲಿದ್ದಾರೆ. ಜೊತೆಗೆ 2023ರ ಏಕದಿನ ವಿಶ್ವಕಪ್ ಬಳಿಕ ಕೊಹ್ಲಿ ನಿವೃತ್ತಿ ಹೊಂದುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ತಮ್ಮ ಮೊದಲ ಪಂದ್ಯದಲ್ಲಿ ಗೌತಮ್ ಗಂಭೀರ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಕೊಹ್ಲಿ, ಕೇವಲ 12 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಈ ಪಂದ್ಯದಲ್ಲಿ ಭಾರತ 8 ವಿಕೆಟ್ಗಳ ಸೋಲು ಕಂಡಿತ್ತು. ಅಂದು 12 ರನ್ಗಳಿಂದ ಆರಂಭವಾದ ಕೊಹ್ಲಿ ಇನ್ನಿಂಗ್ಸ್ ಇಂದು 25 ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಇದನ್ನೂ ಓದಿ: ಇಂದಿನಿಂದ IND vs IRE ಟಿ20 ಸರಣಿ ಆರಂಭ – 11 ತಿಂಗಳ ಬಳಿಕ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಬುಮ್ರಾ
Advertisement
Advertisement
76 ಅಂತಾರಾಷ್ಟ್ರೀಯ ಶತಕ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಸಾಧನೆ ಮಾಡಿದವರ ಪಟ್ಟಿಯಲ್ಲಿ 100 ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅವರನ್ನು ಹಿಂದಿಕ್ಕುವ ಸಾಮರ್ಥ್ಯ ಕೊಹ್ಲಿಗಿದೆ ಎಂಬುದು ತಜ್ಞರ ಅಭಿಪ್ರಾಯ. ಏಕೆಂದರೆ 76 ಅಂತಾರಾಷ್ಟ್ರೀಯ ಶತಕ ಸಿಡಿಸಿರುವ ಕೊಹ್ಲಿ 2ನೇ ಸ್ಥಾನದಲ್ಲಿದ್ದು, 24 ಶತಕ ಸಿಡಿಸಿದರೆ ಸಾಕು ಸಚಿನ್ ಸಾಧನೆ ಸರಿಗಟ್ಟಲಿದ್ದಾರೆ ಎಂಬ ನಿರೀಕ್ಷೆ ಇದೆ. ಏಕದಿನದಲ್ಲಿ 46 ಶತಕ, ಟೆಸ್ಟ್ನಲ್ಲಿ 29 ಶತಕ, ಟಿ20ಯಲ್ಲಿ 1 ಶತಕ ಸಿಡಿಸಿದ್ದಾರೆ.
ನಾಯಕನಾಗಿ ಕೊಹ್ಲಿ ಸಾಧನೆ
ಬ್ಯಾಟ್ಸ್‌ಮ್ಯಾನ್ ಆಗಿ ದಿಗ್ಗಜರ ದಾಖಲೆಗಳನ್ನ ಉಡೀಸ್ ಮಾಡಿರುವ ಕೊಹ್ಲಿ ನಾಯಕನಾಗಿಯೂ ಅಮೋಘ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಎನಿಸಿದ್ದಾರೆ. ವಿದೇಶಿ ನೆಲದಲ್ಲಿ ಟೆಸ್ಟ್ ಗೆಲ್ಲುವುದೇ ಕಷ್ಟ ಎನ್ನುವಂತಿದ್ದ ಕಾಲದಲ್ಲಿ ಕೊಹ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ನೆಲದಲ್ಲಿ ಅವಿಸ್ಮರಣೀಯ ಟೆಸ್ಟ್ ಸರಣಿಗಳನ್ನ ಗೆದ್ದು ಟೀಂ ಇಂಡಿಯಾದ ಘನತೆ ಮೆರೆದಿದ್ದಾರೆ.
68 ಟೆಸ್ಟ್ ಪಂದ್ಯಗಳನ್ನು ಮುನ್ನಡೆಸಿರುವ ಕೊಹ್ಲಿ, ಬರೋಬ್ಬರಿ 40ರಲ್ಲಿ ಗೆಲುವು ದಾಖಲಿಸಿದ್ದಾರೆ. ಕೇವಲ 17 ಪಂದ್ಯಗಳಲ್ಲಿ ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ 11 ಪಂದ್ಯಗಳಲ್ಲಿ ಡ್ರಾ ನಲ್ಲಿ ಫಲಿತಾಂಶ ಅಂತ್ಯಕಂಡಿವೆ. ಗೆಲುವಿನ ಪ್ರಮಾಣ ಶೇ.58.82 ರಷ್ಟಿದೆ. ಏಕದಿನ ಕ್ರಿಕೆಟ್ನಲ್ಲೂ 95 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ. 65 ಪಂದ್ಯಗಳಲ್ಲಿ ಗೆಲುವು, ಕೇವಲ 27 ಸೋಲು ಕಂಡಿದ್ದಾರೆ. ಗೆಲುವಿನ ಪ್ರಮಾಣ 68.42ರಷ್ಟಿದೆ. ಇನ್ನೂ 50 ಟಿ20 ಪಂದ್ಯಗಳಿಗೆ ನಾಯಕತ್ವ ವಹಿಸಿದ ಕೊಹ್ಲಿ, 30 ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. 16 ಪಂದ್ಯಗಳಲ್ಲಿ ಸೋಲು ಕಂಡಿದ್ದು, 60ರಷ್ಟು ಗೆಲುವಿನ ಪ್ರಮಾಣ ಹೊಂದಿದ್ದಾರೆ.
ಕೊಹ್ಲಿ ವೃತ್ತಿಜೀವನ
2008ರಿಂದ ಒಟ್ಟು ಈವರೆಗೆ 275 ಏಕದಿನ ಪಂದ್ಯಗಳನ್ನ ಆಡಿರುವ ಕೊಹ್ಲಿ, 57.32ರ ಸರಾಸರಿಯಲ್ಲಿ, 46 ಶತಕ, 65 ಅರ್ಧಶತಕಗಳ ನೆರವಿನಿಂದ 12,898 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 111 ಪಂದ್ಯಗಳಲ್ಲಿ 29 ಶತಕ, 7 ದ್ವಿಶತಕ, 29 ಅರ್ಧಶತಕಗಳ ನೆರವಿನಿಂದ 8,676 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 254 ರನ್. 115 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ, 1 ಶತಕ ಕೂಡ ಸೇರಿದೆ.
ಐಸಿಸಿ ಟ್ರೋಫಿ ಗೆದ್ದಿಲ್ಲ ಅನ್ನೋದೆ ಚಿಂತೆ
ಹಲವು ವಿಶೇಷ ಸಾಧನೆಗಳನ್ನು ಮಾಡಿರುವ ಕೊಹ್ಲಿ ನಾಯಕತ್ವದಲ್ಲಿ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬ ಕೊರಗು ಕಾಡುತ್ತಿದೆ. ದೇಶ-ವಿದೇಶಗಳಲ್ಲಿ ದ್ವಿಪಕ್ಷೀಯ ಸರಣಿಗಳಲ್ಲಿ ಧೂಳೆಬ್ಬಿಸಿದ ಕಿಂಗ್ ಕೊಹ್ಲಿ, ಎರಡು ಬಾರಿ ಭಾರತ ತಂಡವನ್ನು ಐಸಿಸಿ ಫೈನಲ್ಗೇರಿಸಿದ್ದರು. 2017ರ ಚಾಂಪಿಯನ್ಸ್ ಟ್ರೋಫಿ ಮತ್ತು 2021ರ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ಮುಗ್ಗರಿಸಿತ್ತು. ಇನ್ನುಳಿದಂತೆ ಸೆಮಿಫೈನಲ್ನಲ್ಲಿ ಹೆಚ್ಚಾಗಿ ಐಸಿಸಿ ಟೂರ್ನಿಗಳಲ್ಲಿ ಸೋಲು ಕಂಡಿದೆ. 2013ರ ಬಳಿಕ ಭಾರತ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಬಾರಿ ವಿಶ್ವಕಪ್ ಟೂರ್ನಿ ಕೊಹ್ಲಿಗೆ ಕೊನೆಯ ವಿಶ್ವಕಪ್ ಟೂರ್ನಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ಟೀಂ ಇಂಡಿಯಾ ಕೊಹ್ಲಿಗಾಗಿ ಕಪ್ ಗೆಲ್ಲಲ್ಲೇಬೇಕೆಂಬುದು ಎಲ್ಲರ ಆಶಯ.
Web Stories