ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ (England) ವಿರುದ್ಧ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರನ್ ಮಿಷಿನ್ ವಿರಾಟ್ ಕೊಹ್ಲಿ (Virat Kohli) ವಿಶೇಷ ದಾಖಲೆ ಬರೆದಿದ್ದಾರೆ.
𝐊𝐢𝐧𝐠’𝐬 𝐜𝐨𝐧𝐪𝐮𝐞𝐫𝐞𝐝 𝐭𝐡𝐞 𝐜𝐨𝐧𝐭𝐢𝐧𝐞𝐧𝐭! 👑 🙇🏼♂️
Fastest ever to rack up 1️⃣6️⃣,0️⃣0️⃣0️⃣ international runs in Asia in just 3️⃣4️⃣0️⃣ innings! 👏#PlayBold #ನಮ್ಮRCB #INDvENG #ViratKohli pic.twitter.com/xJhi0KYv0a
— Royal Challengers Bengaluru (@RCBTweets) February 12, 2025
Advertisement
3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಕೊಹ್ಲಿ 55 ಎಸೆತಗಳಲ್ಲಿ 1 ಸಿಕ್ಸರ್, 7 ಬೌಂಡರಿಯೊಂದಿಗೆ 52 ರನ್ ಚಚ್ಚಿದರು. ಈ ಮೂಲಕ ಏಷದ್ಯಾದಲ್ಲೇ ಅತೀ ವೇಗವಾಗಿ 16,000 ರನ್ (ಒಟ್ಟು 16,025 ರನ್) ಪೂರೈಸಿದ ಮೊದಲ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಅಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 73ನೇ ಅರ್ಧಶತಕವನ್ನೂ ಪೂರೈಸಿದ್ದಾರೆ. ಇದನ್ನೂ ಓದಿ: ಪಾಕ್ ಮೈದಾನದಲ್ಲಿ ಫೀಲ್ಡಿಂಗ್ ವೇಳೆ ಹಣೆಗೆ ಬಡಿದ ಚೆಂಡು – ರಕ್ತ ಸೋರುತ್ತಲೇ ಹೊರನಡೆದ ರಚಿನ್ ರವೀಂದ್ರ
Advertisement
Advertisement
340 ಇನ್ನಿಂಗ್ಸ್‌ನಲ್ಲೇ 16,000 ರನ್ ಪೂರೈಸಿದ ವಿರಾಟ್ ಕೊಹ್ಲಿ, 353 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಆಸೀಸ್‌ಗೆ ಬಹುದೊಡ್ಡ ಆಘಾತ – ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದ ಸ್ಟಾರ್ಕ್
Advertisement
ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದವರು
* ಡಾನ್ ಬ್ರಾಡ್ಮನ್ (ಆಸೀಸ್) – 63 ಇನ್ನಿಂಗ್ಸ್‌ಗಳಲ್ಲಿ 5,028
* ಅಲನ್ ಬಾರ್ಡರ್ (ಆಸೀಸ್) – 124 ಇನ್ನಿಂಗ್ಸ್‌ಗಳಲ್ಲಿ 4,850
* ಸ್ಟೀವ್ ಸ್ಮಿತ್ (ಆಸೀಸ್) – 114 ಇನ್ನಿಂಗ್ಸ್‌ಗಳಲ್ಲಿ 4,815
* ವಿವಿಯನ್ ರಿಚರ್ಡ್ಸ್ (ವಿಂಡೀಸ್) – 84 ಇನ್ನಿಂಗ್ಸ್‌ಗಳಲ್ಲಿ 4,488
* ರಿಕಿ ಪಾಂಟಿಂಗ್ (ಆಸೀಸ್) – 99 ಇನ್ನಿಂಗ್ಸ್‌ಗಳಲ್ಲಿ 4,141.
* ವಿರಾಟ್ ಕೊಹ್ಲಿ (ಭಾರತ) – 109 ಇನ್ನಿಂಗ್ಸ್‌ಗಳಲ್ಲಿ 4,001*
ಏಷ್ಯಾದಲ್ಲಿ ವೇಗವಾಗಿ 16,000 ರನ್ ಗಳಿಸಿದ ಬ್ಯಾಟರ್ಸ್
* 340 ಇನ್ನಿಂಗ್ಸ್ – ವಿರಾಟ್ ಕೊಹ್ಲಿ*
* 353 ಇನ್ನಿಂಗ್ಸ್ – ಸಚಿನ್ ತೆಂಡೂಲ್ಕರ್
* 360 ಇನ್ನಿಂಗ್ಸ್ – ಕುಮಾರ್ ಸಂಗಕ್ಕಾರ
* 401 ಇನ್ನಿಂಗ್ಸ್ – ಮಹೇಲಾ ಜಯವರ್ಧನೆ
ಏಷ್ಯಾದಲ್ಲಿ ಅತಿ ಹೆಚ್ಚು ರನ್ ಗಳಿಸಿದವರು
* 21,741 – ಸಚಿನ್ ತೆಂಡೂಲ್ಕರ್
* 18,423 – ಕುಮಾರ್ ಸಂಗಕ್ಕಾರ
* 17,386 - ಮಹೇಲಾ ಜಯವರ್ಧನೆ
* 16,000 – ವಿರಾಟ್ ಕೊಹ್ಲಿ*
* 13,757 – ಸನತ್ ಜಯಸೂರ್ಯ