ಅಡಿಲೇಡ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 1 ಸಾವಿರ ರನ್ ಪೂರೈಸಿದ ಟೀಂ ಇಂಡಿಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
30 ವರ್ಷದ ಕೊಹ್ಲಿ ಅಡಿಲೇಡ್‍ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದು, ಪಂದ್ಯದಲ್ಲಿ 5 ರನ್ ಗಳಿಸಿದ್ದ ವೇಳೆ 1 ಸಾವಿರ ರನ್ ಪೂರ್ಣಗೊಳಿಸಿದರು. ಇದರೊಂದಿಗೆ ಆಸ್ಟ್ರೇಲಿಯಾದಲ್ಲಿ 1 ಸಾವಿರ ರನ್ ಪೂರೈಸಿದ ಭಾರತ 4ನೇ ಹಾಗೂ ಒಟ್ಟಾರೆಯಾಗಿ 28ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
Advertisement
Shot!#AUSvIND pic.twitter.com/0uD0U68lNv
— cricket.com.au (@cricketcomau) December 8, 2018
Advertisement
ಕೊಹ್ಲಿ ಕೇವಲ 18 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದು, ಈ ಹಿಂದೆ ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ 1,809 ರನ್, ವಿವಿಎಸ್ ಲಕ್ಷ್ಮಣ್ 1,236 ರನ್, ರಾಹುಲ್ ದ್ರಾವಿಡ್ 1,143 ರನ್ ಸಿಡಿಸಿದ್ದರು. ಕೊಹ್ಲಿ 59.05 ಸರಾಸರಿಯಲ್ಲಿ 1 ಸಾವಿರ ರನ್ ಪೂರೈಸಿದ್ದು, ಟೆಸ್ಟ್ ತಂಡದ ನಾಯಕರಾಗಿ 2 ಸಾವಿರ ರನ್ ಕೂಡ ಪೂರ್ಣಗೊಳಿಸಿದ್ದಾರೆ. ಉಳಿದಂತೆ ಅಲನ್ ಬಾರ್ಡರ್, ರಿಕಿ ಪಾಟಿಂಗ್, ಗ್ರೇಮ್ ಸ್ಮಿತ್ ಹಾಗೂ ಕುಕ್ ನಾಯಕರಾಗಿ 2 ಸಾವಿರ ರನ್ ಪೂರೈಸಿದ್ದಾರೆ.
Advertisement
ಅಂದಹಾಗೇ ಕ್ಯಾಲೆಂಡರ್ ವರ್ಷವೊಂದರಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡು ಮಾದರಿಗಳಲ್ಲಿ 1 ಸಾವಿರ ರನ್ ಸಿಡಿಸಿ ವಿಶ್ವದ ಟಾಪ್ ಶ್ರೇಯಾಂಕ ಪಡೆದಿರುವ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನ ಕೊಹ್ಲಿ ಹೊಂದಿದ್ದಾರೆ.
Advertisement
1000 Test runs for @imVkohli in Australia.
He is the 4th Indian to achieve this feat ???????? pic.twitter.com/65hdfHx5GQ
— BCCI (@BCCI) December 8, 2018
Kohli reached 1000 runs in Australia in 18th innings
Kohli's Test runs in each country
India – 3105 @ 64.68
Australia – 1004* @ 59.05
England – 727 @ 36.35
South Africa – 558 @ 55.80
Sri Lanka – 394 @ 43.77
West Indies – 327 @ 36.33
New Zealand – 214 @ 71.33
Bangladesh – 14 @ 14 pic.twitter.com/7mCMIVuL8R
— Cricketopia (@CricketopiaCom) December 8, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv