ನವದೆಹಲಿ: ಕೊಹ್ಲಿ (Virat Kohli) ಟೀಂ ಇಂಡಿಯಾದ (Team India) ಅತ್ಯುತ್ತಮ ನಾಯಕ, ಯುವ ಆಟಗಾರರನ್ನು ಹೇಗೆ ಬೆಳೆಸಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ರಿಷಬ್ ಪಂತ್ ಹಾಗೂ ಇನ್ನುಳಿದ ಜೂನಿಯರ್‍ಗಳಿಗೆ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಆಡಬೇಕು ಎಂದು ಪ್ರೋತ್ಸಾಹಿಸಿದ್ದರು. ನಿರ್ದಿಷ್ಟವಾಗಿ ಹೀಗೆ ಆಡಬೇಕು ಎಂದು ಒತ್ತಡ ಹೇರಿರಲಿಲ್ಲ ಎಂದು ಟೀಂ ಇಂಡಿಯಾ ಬೌಲರ್ ಇಶಾಂತ್ ಶರ್ಮಾ (Ishant Sharma) ಹೇಳಿದ್ದಾರೆ.
ಯುವ ಕ್ರಿಕೆಟಿಗರ ಪ್ರಗತಿಗೆ ಕೊಹ್ಲಿ ವಹಿಸಬಹುದಾದ ಪಾತ್ರದ ಬಗ್ಗೆಯ ಕೇಳಲಾದ ಪ್ರಶ್ನೆಗೆ, ಹಿರಿಯ ಆಟಗಾರರಾಗಿದ್ದರೆ ಮೊದಲು ಉತ್ತಮ ರನ್ ಗಳಿಸಬೇಕು. ಇಲ್ಲದಿದ್ದರೆ ಜೂನಿಯರ್‍ಗಳು ನೀವು ಸೀನಿಯರ್ ಆಗಿರುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಾರೆ ಎಂದು ಉತ್ತರಿಸಿದರು. ಮುಂದುವರೆದು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಶೈಲಿ ನೋಡುತ್ತಿದ್ದರೆ ಖಂಡಿತವಾಗಿಯೂ ಉತ್ತಮ ರನ್ ಗಳಿಸುತ್ತಾರೆ ಎಂದರು.ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಹಲವು ದಾಖಲೆ ಮುರಿದ ಯಶಸ್ವಿ ಜೈಸ್ವಾಲ್
Advertisement
Advertisement
ವೆಸ್ಟ್ ಇಂಡೀಸ್ (West Indies) ಪ್ರವಾಸದ ಮೊದಲ ಪಂದ್ಯದಲ್ಲಿ ಚೊಚ್ಚಲ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಯಶಸ್ಸು ಟೀಂ ಇಂಡಿಯಾದ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಅಲ್ಲದೇ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಕ್ರಿಕೆಟ್ ದಾಖಲೆಗಳನ್ನು ಉರುಳಿಸುವತ್ತ ಮುನ್ನುಗ್ಗುತ್ತಿದ್ದಾರೆ. ಇದರಿಂದ ಟೀಂ ಇಂಡಿಯಾ ಬಲಿಷ್ಠವಾಗುತ್ತಿರುವುದು ಗೋಚರಿಸುತ್ತಿದೆ ಎಂದಿದ್ದಾರೆ.
Advertisement
Advertisement
ಇತ್ತೀಚಿನ ವರ್ಷಗಳಲ್ಲಿ ಟೆಸ್ಟ್ ರನ್‍ಗಳ ಕೊರತೆಯಿಂದಾಗಿ ಕೊಹ್ಲಿ ಟೀಕೆಗೊಳಗುತ್ತಿದ್ದಾರೆ. ಇದನ್ನೂ ಓದಿ: IND vs WI: ಅಪ್ಪ, ಮಗನನ್ನು ಔಟ್ ಮಾಡಿ ದಾಖಲೆ ಬರೆದ ಅಶ್ವಿನ್
Web Stories