ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ 10 ಕೋಟಿ ಹಿಂಬಾಲಕರನ್ನು ಹೊಂದುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.
ವಿವಿಧ ಸಾಮಾಜಿಕ ಜಾಲತಾಣದಲ್ಲಿ 100 ಮಿಲಿಯನ್ (10 ಕೋಟಿ) ಹಿಂಬಾಲಕರನ್ನು ಕೊಹ್ಲಿ ಹೊಂದಿದ್ದಾರೆ. ಫೇಸ್‍ಬುಕ್‍ನಲ್ಲಿ 3.7 ಕೋಟಿ, ಇನ್‍ಸ್ಟಾಗ್ರಾಮ್‍ನಲ್ಲಿ 3.35 ಕೋಟಿ, ಟ್ವಿಟ್ಟಿರಿನಲ್ಲಿ 2.94 ಕೋಟಿ ಮಂದಿ ಕೊಹ್ಲಿರನ್ನ ಹಿಂಬಾಲಿಸುತ್ತಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯ ಕ್ರಿಕೆಟರ್ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
Advertisement
The future looks bright! ???? pic.twitter.com/78LmfFMXjY
— Virat Kohli (@imVkohli) May 19, 2019
Advertisement
ತೆಂಡೂಲ್ಕರ್ ಅವರಿಗೆ ಇನ್‍ಸ್ಟಾಗ್ರಾಮ್‍ನಲ್ಲಿ 1.47 ಕೋಟಿ, ಫೇಸ್‍ಬುಕ್ ನಲ್ಲಿ 2.8 ಕೋಟಿ, ಟ್ವಿಟ್ಟರ್ ನಲ್ಲಿ 2.91 ಕೋಟಿ ಫಾಲೋವರ್ಸ್‍ಗಳಿದ್ದು, ಒಟ್ಟು 7.4 ಕೋಟಿ ಹಿಂಬಾಲಕರಿದ್ದಾರೆ.
Advertisement
ಈ ಪಟ್ಟಿಯಲ್ಲಿ ಧೋನಿ 4.1 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ. ಧೋನಿಗೆ ಫೇಸ್‍ಬುಕ್ ನಲ್ಲಿ 1.34 ಕೋಟಿ, ಇನ್‍ಸ್ಟಾಗ್ರಾಮ್ ನಲ್ಲಿ 2.03 ಕೋಟಿ, ಟ್ಟಿಟ್ಟರ್ ನಲ್ಲಿ 74 ಲಕ್ಷ ಹಿಂಬಾಲಕರಿದ್ದಾರೆ.
Advertisement
ಸದ್ಯ ಕೊಹ್ಲಿ ಎದುರು ವಿಶ್ವಕಪ್ ಗೆಲುವಿನ ಗುರಿ ಇದ್ದು, ಮೇ 22 ರಂದು ಕೊಹ್ಲಿ ಬಳಗ ಇಂಗ್ಲೆಂಡ್ ವಿಶ್ವಕಪ್ ಪ್ರವಾಸವನ್ನು ಆರಂಭಿಸಲಿದೆ.
https://www.instagram.com/p/BtfaPGRAJ5l/