ಚಂಡೀಗಢ: ಮಳೆಯಿಂದಾಗಿ ಹೆಚ್ಚಿದ ಗುರುಗ್ರಾಮ್ (Gurugram) ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೋರ್ವ ಹೆಗಲ ಮೇಲೆ ಸ್ಕೂಟರ್ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಭಾರತದ (North India) ಹಲವೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಒಂದಿಲ್ಲೊಂದು ಸಮಸ್ಯೆ ಉಂಟಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಮಳೆಯಬ್ಬರದಿಂದಾಗಿ ಗುರುಗ್ರಾಮ್‌ದಲ್ಲಿ ಟ್ರಾಫಿಕ್ (Gurugram traffic) ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.ಇದನ್ನೂ ಓದಿ: ಅಪಾಯ ಮಟ್ಟ ಮೀರಿದ ಯಮುನಾ ನದಿ – ದೆಹಲಿ ಸಚಿವಾಲಯಕ್ಕೂ ನುಗ್ಗಿದ ಪ್ರವಾಹ ನೀರು
In Gurgaon, a man carried his scooter on his shoulder to avoid traffic 😭 pic.twitter.com/HQdXpQ6leC
— Aaraynsh (@aaraynsh) September 3, 2025
ವೈರಲ್ ಆದ ವಿಡಿಯೋದಲ್ಲಿ, ಗುರುಗ್ರಾಮ್‌ದ ರಸ್ತೆಯೊಂದರಲ್ಲಿ ಟ್ರಾಫಿಕ್ ಹೆಚ್ಚಾಗಿದ್ದಕ್ಕೆ ವ್ಯಕ್ತಿಯೋರ್ವ ತಮ್ಮ ಸ್ಕೂಟರ್‌ನ್ನು ಹೆಗಲ ಮೇಲೆ ಇಟ್ಟುಕೊಂಡು ಹೋಗುತ್ತಿದ್ದಾರೆ. ಜೊತೆಗೆ ಇನ್ನೋರ್ವ ವ್ಯಕ್ತಿ ಅದಕ್ಕೆ ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋಗೆ ಹಲವು ಕಾಮೆಂಟ್ಸ್‌ಗಳು ಬಂದಿದ್ದು, ಅದರಲ್ಲಿ ಒಬ್ಬರು ಗುರುಗ್ರಾಮ್‌ದ ಟ್ರಾಫಿಕ್‌ಗೆ ಇದೊಂದೇ ಪರಿಹಾರ ಎಂದು ಬರೆದುಕೊಂಡಿದ್ದಾರೆ.