ಹಿಮಾಚಲ ಉಪಸಭಾಪತಿಯಿಂದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಆರೋಪ

Public TV
1 Min Read
Hans Raj

ಶಿಮ್ಲಾ: ಬಿಜೆಪಿ ಶಾಸಕ ಮತ್ತು ಹಿಮಾಚಲ ವಿಧಾನಸಭೆಯ ಉಪಸಭಾಪತಿ ಹಂಸರಾಜ್ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Hans Raj 1

ಚಂಬಾ ಜಿಲ್ಲೆಯ ಚುರಾ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಯಾಗಿರುವ ಹಂಸರಾಜ್ ಅವರು ದಿಢೀರ್ ತಪಾಸಣೆಗೆಂದು ಗುರುವಾರ ರೈಲಾ ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಕೋವಿಡ್ ಮತ್ತು ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಮುಳುಗಡೆ – ಸಿಲಿಕಾನ್ ಸಿಟಿಯಲ್ಲಿ ವಾತಾವರಣ ಕೂಲ್

ಹಂಸರಾಜ್ ಅವರು ಮಾತನಾಡುತ್ತಿದ್ದಾಗ, ವಿದ್ಯಾರ್ಥಿಯೊಬ್ಬನು ನಗುತ್ತಿದ್ದನು. ಇದರಿಂದ ಕೋಪಗೊಂಡ ಉಪಸಭಾಪತಿ ವಿದ್ಯಾರ್ಥಿಗೆ ಯಾಕೆ ನಗುತ್ತಿದ್ದೀಯಾ ಎಂದು ಪ್ರಶ್ನಿಸಿ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ವೀಡಿಯೋದಲ್ಲಿ ಸೆರೆಯಾಗಿದ್ದರೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಸದ್ಯ ಈ ವೀಡಿಯೋ ಸೋಶಿಯಕ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿದ್ಯಾರ್ಥಿಗಳೊಂದಿಗೆ ಸಭಾಧ್ಯಕ್ಷರು ಈ ರೀತಿ ವರ್ತಿಸಿದ್ದಕ್ಕೆ ನೆಟ್ಟಿಗರಿಂದ ಟೀಕೆಗೆ ಒಳಗಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ತಂದೆ, ನಾವು ಇಲ್ಲಿಯವರೆಗೂ ನಮ್ಮ ಮಗನನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ಬೆಳೆಸಿದ್ದೇವೆ. ಆದರೆ ಎಂದಿಗೂ ಹೊಡೆದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

Share This Article
Leave a Comment

Leave a Reply

Your email address will not be published. Required fields are marked *