ಹುಬ್ಬಳ್ಳಿ: ತಲ್ವಾರ್ ನಿಂದ ಕೇಕ್ ಕತ್ತರಿಸಿ ವಿಚಿತ್ರವಾಗಿ ಹುಟ್ಟುಹಬ್ಬವನ್ನು ವ್ಯಕ್ತಿಯೊಬ್ಬ ಆಚರಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಣೇಶ್ ಪೇಟೆಯಲ್ಲಿ ಮೀನಿನ ವ್ಯಾಪಾರಿಯಾಗಿರುವ ಇರ್ಶಾದ್ ತನ್ನ ಅಂಗಡಿಯ ಮೇಲೆ ಸ್ನೇಹಿತರ ಜೊತೆಗೂಡಿ ತಲ್ಪಾರ್ ನಿಂದ ಕೇಕ್ ಕತ್ತರಿಸಿದ್ದಾನೆ. ತಲ್ವಾರ್, ಚೂರಿಯಿಂದ ಮೀನಿನ ಆಕಾರದ ಕೇಕ್ ಕತ್ತರಿಸಿ ನಂತರ ಅದರಿಂದಲೇ ಎಲ್ಲರಿಗೂ ತಿನ್ನಿಸಿದ್ದಾನೆ.
ಸದ್ಯ ಈ ವಿಚಿತ್ರ ಹುಟ್ಟುಹಬ್ಬ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕವಾಗಿ ತಲ್ಪಾರ್ ಮೂಲಕ ಹುಟ್ಟು ಹಬ್ಬ ಆಚರಿಸಿದ್ದಕ್ಕೆ ಟೀಕೆ ಕೇಳಿ ಬಂದಿದೆ.
https://www.youtube.com/watch?v=WcvI-ZIRbGg