ನದಿಯಲ್ಲಿ ಬೀಳುತ್ತಿದ್ದ ಪುಟ್ಟ ಬಾಲಕಿಯನ್ನು ನಾಯಿ ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
16 ಸೆಕೆಂಡ್ ಈ ವಿಡಿಯೋದಲ್ಲಿ ಬಾಲಕಿ ಆಳವಾದ ನದಿಯಲ್ಲಿ ಬಿದ್ದ ಬಾಲನ್ನು ತೆಗೆದುಕೊಳ್ಳಲು ಮುಂದಾಗುತ್ತಾಳೆ. ಈ ವೇಳೆ ಅಲ್ಲಿಯೇ ಕುಳಿತಿದ್ದ ನಾಯಿ ಆಕೆಯ ಫ್ರಾಕ್ ಹಿಡಿದು ಹಿಂದೆ ಎಳೆದು ಕೆಳಗೆ ಬೀಳಿಸುತ್ತದೆ. ಬಳಿಕ ತಾನೇ ನದಿ ಬಳಿ ಹೋಗಿ ಬಾಲ್ ತೆಗೆದುಕೊಂಡು ಬರುತ್ತದೆ.
ಈ ವಿಡಿಯೋವನ್ನು 41 ಸಾವಿರ ಫಾಲೋವರ್ಸ್ ವುಳ್ಳ ಫಿಸಿಕ್ಸ್ ಆಸ್ಟ್ರೋನೋಮಿ. ಆರ್ ಗನೈಸೇಶನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಈ ವಿಡಿಯೋಗೆ ಇದುವರೆಗೂ 93,000ಕ್ಕೂ ಹೆಚ್ಚು ರೀ-ಟ್ವೀಟ್ ಬಂದಿದೆ ಹಾಗೂ 30 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದೆ.
ಕೆಲವರು ಈ ವಿಡಿಯೋ ನೋಡಿ ‘ಯಾವುದೇ ಪದ ಇಲ್ಲ’ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ‘ಯಾಕೆ ಮನುಷ್ಯರು ನಾಯಿಗಿಂತ ಹೆಚ್ಚಾಗಿ ಇರುವುದಿಲ್ಲ ಹಾಗೂ ಎಲ್ಲರನ್ನು ರಕ್ಷಿಸುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ‘ಹೀರೋ’, ‘ಗುಡ್ ಡಾಗ್’ ಎಂದು ಕಮೆಂಟ್ ಮಾಡಿದ್ದಾರೆ.
One word this video… pic.twitter.com/D1jpArOdco
— Physics-astronomy.org (@OrgPhysics) June 16, 2019