ಮುಂಬೈ: ಪೋರ್ಶೆ ಕಾರು ಅಪಘಾತದ ಬೆನ್ನಲ್ಲೇ ಮುಂಬೈನ 17 ವರ್ಷದ ಹುಡುಗನೊಬ್ಬ ವ್ಯಕ್ತಿಯೊಬ್ಬನನ್ನು BMW ಕಾರಿನ ಮೇಲೆ ಮಲಗಿಸಿಕೊಂಡು ಕಲ್ಯಾಣ್‌ನ ಜನನಿಬಿಡ ರಸ್ತೆಯಲ್ಲಿ ಪರವಾನಗಿ ಇಲ್ಲದೆ ಓಡಿಸಿದ ಘಟನೆ ಬೆಳಕಿಗೆ ಬಂದಿದೆ.
ಪುಣೆ ಪೋರ್ಶೆ ಕಾರು ಅಪಘಾತದಲ್ಲಿ (Pune Porsche Car Accident) ಅಪ್ರಾಪ್ತ ತನ್ನ ಐಷಾರಾಮಿ ಕಾರನ್ನು ಬೈಕ್‌ಗೆ ಡಿಕ್ಕಿಯಾಗಿಸಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣವಾಗಿದ್ದನು. ಈ ಘಟನೆಯ ಬಗ್ಗೆ ಭಾರೀ ಆಕ್ರೋಶದ ನಡುವೆ ಈ ಘಟನೆ ಬೆಳಕಿಗೆ ಬಂದಿದೆ. ಈ ಸ್ಟಂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Watch: Mumbai Teen Drives Father's BMW On Busy Road With Man On Bonnet angry ???? ???? ???? @MumbaiPolice pic.twitter.com/5B6vvcHJAN
— ????ᖇꫝ᧒????????ᶦ–WᎥtness???? (@BitmanRaj) May 27, 2024
ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೋ ವೈರಲ್ ಆದ ತಕ್ಷಣ, ಪೊಲೀಸರು ಕಾರಿನ ಬಾನೆಟ್ ಮೇಲೆ ಮಲಗಿದ್ದ ವ್ಯಕ್ತಿಯನ್ನು ಸುಭಮ್ ಮಿಥಿಲಾ ಎಂದು ಗುರುತಿಸಿದ್ದಾರೆ. ಕಾರು ಚಾಲಕ 17 ವರ್ಷದ ಹುಡುಗ ಮತ್ತು ಅವನ ತಂದೆ, ನಿವೃತ್ತ ಸರ್ಕಾರಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಅಪ್ರಾಪ್ತರು ಶನಿವಾರ ಥಾಣೆ ಜಿಲ್ಲೆಯ ಕಲ್ಯಾಣ್ ನಗರದ ಜನನಿಬಿಡ ಶಿವಾಜಿ ಚೌಕ್ ಪ್ರದೇಶದಲ್ಲಿ ಕಾರನ್ನು ಚಲಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಹನಿಮೂನ್ ಪೀರಿಯೆಡ್ ಮುಗಿದಿದ್ರೂ ಇನ್ನೂ ಅಭಿವೃದ್ಧಿ ಕೆಲಸ ಮಾಡ್ತಿಲ್ಲ: ವಿಜಯೇಂದ್ರ
ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಗುಂಡ್ ಮಾತನಾಡಿ, ಸಾಮಾಜಿಕ ಮಾಧ್ಯಮದ ರೀಲ್ಸ್‌ಗಳಿಂದ ಪ್ರೇರಿತನಾಗಿ ಅಪ್ರಾಪ್ತ ತಂದೆ 5 ಲಕ್ಷ ರೂ.ಗೆ ಸೆಕೆಂಡ್ ಹ್ಯಾಂಡ್ ಬಿಎಂಡಬ್ಲ್ಯು ಕಾರನ್ನು ಖರೀದಿಸುವಂತೆ ಹಠ ಹಿಡಿದಿದ್ದಾನೆ. ಅಲ್ಲದೇ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ರಸ್ತೆಯಲ್ಲಿ ಓಡಿಸಿದ್ದಾನೆ. ಇನ್ನು ಕಾರಿನ ಕಾರಿನ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.